ರಾಜ್ಯ

ಕಲ್ಲಿದ್ದಲು ಕೊರತೆ: ತುರ್ತು ಪರಿಸ್ಥಿತಿ ಘೋಷಿಸಿದ ಇಂಧನ ಇಲಾಖೆ, ರಾಜ್ಯಕ್ಕೆ ವಿದ್ಯುತ್ ಕಡಿತದ ಭೀತಿ

ರಾಜ್ಯದಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಹನ್ನಲೆಯಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದಿಸುವ ರಾಯಚೂರಿನ ಆರ್'ಟಿಪಿಎಸ್, ಬಳ್ಳಾರಿಯ ಬಿಪಿಟಿಎಸ್ ಘಟಕಗಳ ಮೇಲೆ ಪರಿಣಾ ಬೀರಲಿದ್ದು, ವಿದ್ಯುತ್ ಕಡಿತದ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಇದೇ ಮೊದಲ...

ಕಲ್ಲಿದ್ದಲು ಕೊರತೆ: ತುರ್ತು ಪರಿಸ್ಥಿತಿ ಘೋಷಿಸಿದ ಇಂಧನ ಇಲಾಖೆ, ರಾಜ್ಯಕ್ಕೆ ವಿದ್ಯುತ್ ಕಡಿತದ ಭೀತಿ
ಇಂಧನ ಸಚಿವ ಡಿ.ಕೆ. ಶಿವಕುಮಾರ್
Published On :
ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಹನ್ನಲೆಯಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದಿಸುವ ರಾಯಚೂರಿನ ಆರ್'ಟಿಪಿಎಸ್, ಬಳ್ಳಾರಿಯ ಬಿಪಿಟಿಎಸ್ ಘಟಕಗಳ ಮೇಲೆ ಪರಿಣಾ ಬೀರಲಿದ್ದು, ವಿದ್ಯುತ್ ಕಡಿತದ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಇಂಧನ ಇಲಾಖೆ ರಾಜ್ಯದಲ್ಲಿ ಕಲ್ಲಿದ್ದಲು ತುರ್ತು ಪರಿಸ್ಥಿತಿ ಘೋಷಿಸಿದೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು, ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ತಯಾರಿಸಲು ಬೇಕಾದ ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗುತ್ತಿದ್ದು, ಮುಂದಿನ 2 ತಿಂಗಳು ಕಲ್ಲಿದ್ದಲು ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಹೇಳಿದ್ದಾರೆ. 
ರಾಜ್ಯದಲ್ಲಿ ವಿದ್ಯುತ್ ಘಟಕಗಳಲ್ಲಿ ಒಂದು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ಇದ್ದು, ಹೀಗಾಗಿ ಎಲ್ಲಾ ರಾಜ್ಯಗಳು ಕಲ್ಲಿದ್ದಲು ಅಭಾವವನ್ನು ಅನುಭವಿಸುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಕಲ್ಲಿದ್ದಲು ಸರಬರಾಜಾಗುತ್ತಿಲ್ಲ. ಪ್ರಸ್ತುತ ಇರುವ ಪರಿಸ್ಥಿತಿ ಹೀಗೆಯೇ ಮುಂದುವರೆದಿದ್ದೇ ಆದರೆ, ಮುಂದಿನ ತಿಂಗಳಲ್ಲಿ ಗಂಭೀರ ಸಮಸ್ಯೆಗಳು ಎದುರಾಗಲಿದೆ. ಈ ಪರಿಸ್ಥಿತಿ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ದೇಶ ವಿವಿಧ ರಾಜ್ಯಗಳಿಗೂ ಎದುರಾಗಲಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಲ್ಲಿದ್ದಲು ಗುತ್ತಿಗೆ ಸಂಬಂಧ ಎಂಪ್ಟಾ ಸಂಸ್ಥೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಧಾರವಿಲ್ಲದೆ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಿರುವುದು ಸರಿಯಲ್ಲ. ಒಬ್ಬ ಹಿರಿಯ ರಾಜಕಾರಣಿಯಾಗಿ ಯಡಿಯೂರಪ್ಪ ಅವರು ಈ ರೀತಿಯ ಆರೋಪ ಮಾಡಿದರೆ, ಭೂಮಿ ನಡುತ್ತದೆ. ಆಧಾರ ಹಾಗೂ ಸತ್ಯಗಳಿಲ್ಲ ಹಾದಿಯನ್ನು ಅವರು ಆಯ್ಕೆ ಮಾಡಿದ್ದಾರೆ. ಒಂದು ವೇಳೆ ನಾನು ತಪ್ಪು ಮಾಡಿರುವುದು ಸಾಬೀತಾದರೆ, ನನ್ನನ್ನು ಗಲ್ಲಿಗೇರಿಸಲಿ ಎಂದಿದ್ದಾರೆ. 
ಲೈನ್ ಮ್ಯಾನ್ ಗಳ ಹೆಸರು ಇನ್ನು ಮುಂದೆ ಪವರ್ ಮ್ಯಾನ್
ವಿದ್ಯುತ್ ಇಲಾಖೆ ಅಸ್ತಿತ್ವಕ್ಕೆ ಬಂದಾಗಿನಿಂದ ಸೇವೆ ಸಲ್ಲಿಸುತ್ತಿರುವ ಲೈನ್ ಮ್ಯಾನ್ ಗಳ ಹೆಸರು ಇನ್ನು ಮುಂದೆ ಪವರ್ ಮ್ಯಾನ್ ಆಗಲಿದೆ. 
ತಮ್ಮ ಹುದ್ದೆಯ ಹೆಸರನ್ನು ಬದಲಾವಣೆ ಮಾಡಬೇಕೆಂದು ಹಲವು ವರ್ಷಗಳಿಂದಲೂ ಲೈನ್ ಮ್ಯಾನ್ ಗಳು ಮನವಿ ಮಾಡುತ್ತಿದ್ದರು. ವಿವಿಧ ವಲಯದಿಂದ ಬಂದ ಸಲಹೆಗಳ ಮೇರೆಗೆ ಇನ್ನು ಮುಂದೆ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸುವವರ ಹೆಸರನ್ನು ಪವರ್ ಮ್ಯಾನ್ ಎಂದು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. 
ಕೆಪಿಟಿಸಿಎಲ್ ಹೊಸ ಕಟ್ಟಡನವನ್ನು ರೂ.130 ಕೋಟಿ ವೆಚ್ಚದಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿನ ಎರಡು ಎಕರೆ ಭೂಮಿಯಲ್ಲಿ ಇಂಧನ ಭವನವನ್ನು ನಿರ್ಮಿಸಲಾಗುತ್ತದೆ. 174 ಮಂದಿಗೆ 2017ನೇ ಸಾಲಿನ ಪವರ್ ಅವಾರ್ಡ್ ಗಳನ್ನು ಅ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.