105 ವರ್ಷ ಬದುಕುತ್ತೇನೆ, ಇನ್ನೂ 2 ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಟಿ.ಬಿ ಜಯಚಂದ್ರ
ಮೂಢ ನಂಬಿಕೆ ವಿರೋಧಿ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರಲು ಸರ್ಕಾರ ಸಿದ್ದತೆ ನಡೆಸುತ್ತಿದೆ, ಇದೇ ವೇಳೆ ಕಾನೂನು ಸಚಿವ ಟಿ,ಬಿ ...

Published On :
ತುಮಕೂರು: ಮೂಢ ನಂಬಿಕೆ ವಿರೋಧಿ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರಲು ಸರ್ಕಾರ ಸಿದ್ದತೆ ನಡೆಸುತ್ತಿದೆ, ಇದೇ ವೇಳೆ ಕಾನೂನು ಸಚಿವ ಟಿ,ಬಿ ಜಯಚಂದ್ರ ಜ್ಯೋತಿಷಿಗಳು ತಮಗೆ ಹೇಳಿದ ಭವಿಷ್ಯವನ್ನು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
ಜ್ಯೋತಿಷಿಗಳ ಪ್ರಕಾರ ನಾನು 105 ವರ್ಷ ಬದುಕುತ್ತೇನೆ, ಇನ್ನೂ 2 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಜಯಚಂದ್ರ ಹೇಳಿದ್ದಾರೆ.
ಗಾಂದಿ ಜಯಂತಿ ಅಂಗವಾಗಿ ತುಮಕೂರಿನಲ್ಲಿ ಮಾತೃಪೂರ್ಣ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಮೂಢ ನಂಬಿಕೆ ವಿರೋಧಿ ಕಾಯಿದೆಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಸೇರಿಸಬೇಕೆಂಬ ಒತ್ತಡವಿತ್ತು, ಆದರೆ ಜ್ಯೋತಿಷ್ಯ ವಿಜ್ಞಾನವಾಗಿದೆ, ಹೀಗಾಗಿ ಅದನ್ನು ಮೂಡ ನಂಬಿಕೆ ವಿರೋಧಿ ಕಾಯಿದೆಯಲ್ಲಿ ಸೇರಿಸುವುದಿಲ್ಲ ಎಂದು ಹೇಳಿದ್ದಾರೆ.
2018ರ ವಿಧಾನ ಸಭೆ ಚುನಾವಣೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ, ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೇ ತಪ್ಪೇನು ಎಂದು ಅವರು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Astrologyತುಮಕೂರುಜ್ಯೋತಿಷ್ಯ ಶಾಸ್ತ್ರTumakuruT B JayachandraAnti-Superstition Bill. ಟಿ.ಬಿ ಜಯಚಂದ್ರಮೌಢ್ಯ ವಿರೋಧಿ ಕಾಯಿದೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


