ಬೆಂಗಳೂರು: ಯುವತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ವ್ಯಕ್ತಿಯೊಬ್ಬ ಯುವತಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ....

ಬೆಂಗಳೂರು: ವ್ಯಕ್ತಿಯೊಬ್ಬ ಯುವತಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಸಮೀಪ ಮಾರೇನಹಳ್ಳಿಯಲ್ಲಿ ನಿನ್ನೆ ನಡೆದಿದೆ.
ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಕೃಷ್ಣ ಅಂಗಡಿ ಮಾಲಿಕ ಮಧು ಅವರ ಸೊಸೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದ್ವಿತೀಯ ಪದವಿಯಲ್ಲಿ ಓದುತ್ತಿರುವ ದಿವ್ಯ ಎಂಬಾಕೆಯನ್ನು ಕೊಂದ ನಂತರ ರಾಮಕೃಷ್ಣ ನಿನ್ನೆ ಅಪರಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಿವ್ಯಳನ್ನು ರಾಮಕೃಷ್ಣ ಪ್ರೀತಿಸುತ್ತಿದ್ದ ಆದರೆ ಆಕೆ ಅವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದು ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಜಯನಗರ ಎಸಿಪಿ ಪರಮೇಶ್ವರ ಹೆಗ್ಡೆ, ಮಧು ಅವರ ಮಾಲಿಕತ್ವದ ಕೋಳಿ ಅಂಗಡಿಯಲ್ಲಿ ಕಳೆದ 15 ವರ್ಷಗಳಿಂದ ರಾಮಕೃಷ್ಣ ಕೆಲಸ ಮಾಡುತ್ತಿದ್ದ. ಮಧುವಿನ ಸೋದರಿ ಸುಭಾಶಿಣಿ ಮದುವೆಯಾದ ನಂತರ ತನ್ನ ಮಗಳು ದಿವ್ಯ ಜೊತೆಗೆ ಅದೇ ಕಟ್ಟಡದಲ್ಲಿ ವಾಸವಾಗಿದ್ದಾಳೆ.
ಅನೇಕ ವರ್ಷಗಳಿಂದ ರಾಮಕೃಷ್ಣ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಮಧುವಿನ ಕುಟುಂಬದವರು ಅವನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು ಎನ್ನುತ್ತಾರೆ.
ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ರಾಮಕೃಷ್ಣ ಮತ್ತು ದಿವ್ಯ ಮಾತನಾಡುತ್ತಿರುವುದನ್ನು ಮಧು ನೋಡಿದ್ದಾರೆ. ನಂತರ ದೂರವಾಣಿ ಮೂಲಕ ಅವರಿಬ್ಬರನ್ನು ಸಂಪರ್ಕಿಸಲೆತ್ನಿಸಿದಾಗ ಪ್ರತಿಕ್ರಿಯೆ ಬರಲಿಲ್ಲ. ಸುಭಾಶಿಣಿ ಮನೆಗೆ ಹೋಗಿ ನೋಡಿದಾಗ ಮನೆ ಬೀಗ ಹಾಕಲಾಗಿತ್ತು. ಬೀಗ ಮುರಿದು ಒಳಗೆ ಹೋಗಿ ಬೆಡ್ ರೂಂನಲ್ಲಿ ನೋಡಿದಾಗ ರಾಮಕೃಷ್ಣ ಮತ್ತು ದಿವ್ಯ ಇಬ್ಬರೂ ಮೃತಪಟ್ಟಿದ್ದರು. ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ರಾಮಕೃಷ್ಣ ಶಾಲಿನಲ್ಲಿ ದಿವ್ಯಳ ಕುತ್ತಿಗೆ ಹಿಸುಕಿ ಸಾಯಿಸಿದ್ದ.
ತನಗೆ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದು ರಾಮಕೃಷ್ಣ ದಿವ್ಯಳನ್ನು ಕೊಂದಿರಬೇಕು. ನಂತರ ಭಯದಿಂದ ತಾನು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಶಂಕಿಸಿದ್ದಾರೆ.
ದಿವ್ಯ ಕೆಟಿಎಸ್ ವಿ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಳು. ರಾಮಕೃಷ್ಣ ನೆಲಮಂಗಲ ಮೂಲದವನು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


