ರಾಜ್ಯ

ಮಕ್ಕಳ ಸಹಾಯವಾಣಿಗೆ ಪ್ರತಿದಿನ ಮಕ್ಕಳ ಸಹಾಯವಾಣಿಗೆ ಸುಮಾರು 10 ಯಾತನಾ ಕರೆಗಳು!

ನಗರದ ಮಕ್ಕಳ ಸಹಾಯವಾಣಿ 1098ಗೆ ಪ್ರತಿನಿತ್ಯ ಬರುವ 200ಕ್ಕೂ ಹೆಚ್ಚು ಕರೆಗಳಲ್ಲಿ ಸುಮಾರು 10 ...

ಮಕ್ಕಳ ಸಹಾಯವಾಣಿಗೆ ಪ್ರತಿದಿನ ಮಕ್ಕಳ ಸಹಾಯವಾಣಿಗೆ ಸುಮಾರು 10 ಯಾತನಾ ಕರೆಗಳು!
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ನಗರದ ಮಕ್ಕಳ ಸಹಾಯವಾಣಿ 1098ಗೆ ಪ್ರತಿನಿತ್ಯ ಬರುವ 200ಕ್ಕೂ ಹೆಚ್ಚು ಕರೆಗಳಲ್ಲಿ ಸುಮಾರು 10 ಕರೆಗಳು ಮಕ್ಕಳಿಂದಲೇ ಬರುತ್ತವೆ.ತಾವು ಒತ್ತಡಕ್ಕೊಳಗಾಗಿದ್ದೇವೆ ಅಥವಾ ನಿಂದನೆ, ಅಪಮಾನಕ್ಕೊಳಗಾಗಿದ್ದೇವೆ ಎಂಬಿತ್ಯಾದಿ ದೂರುಗಳನ್ನು ಹೊತ್ತು ಮಕ್ಕಳು ಕರೆ ಮಾಡುತ್ತಾರೆ. 2011ರಲ್ಲಿ ರಾಜ್ಯದಲ್ಲಿ ಮಕ್ಕಳ ಸಹಾಯವಾಣಿ ಆರಂಭವಾದಾಗಿನಿಂದ ಕರೆಗಳು ಬರುತ್ತಿರುವ ಸಂಖ್ಯೆ ಜಾಸ್ತಿಯಾಗಿದೆ ಎನ್ನುತ್ತಾರೆ ಬೆಂಗಳೂರು ಮಕ್ಕಳಸಹಾಯವಾಣಿಯ ನೋಡಲ್ ಮೇಲ್ವಿಚಾರಕ ಜಿ.ನಾಗಸಿಂಹ ರಾವ್.
ಒಮ್ಮೆ ಒಂದು ಶಾಲೆಯಲ್ಲಿ ಮುಖ್ಯಸ್ಥರು ವಿದ್ಯಾರ್ಥಿಯೊಬ್ಬ ಸಿಗರೇಟು ಸೇದುವುದನ್ನು ನೋಡುತ್ತಾರೆ. ಶಾಲಾ ಮುಖ್ಯಸ್ಥರು ಪೋಷಕರನ್ನು ಕರೆದುಕೊಂಡು ಬರುವಂತೆ ಹೇಳುತ್ತಾರೆ. ಆದರೆ ವಿದ್ಯಾರ್ಥಿ ತನ್ನ ಪೋಷಕರ ಮೇಲಿನ ಭಯದಿಂದ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಶಾಲೆಗೆ ತನ್ನ ಪೋಷಕರಾಗಿ ಹೋಗುವಂತೆ ಕೇಳಿಕೊಂಡನು. ಆತನ ಮೇಲೆ ತೀವ್ರ ಒತ್ತಡವಿತ್ತು ಎನ್ನುತ್ತಾರೆ ರಾವ್. ಇವರು ಚೈಲ್ಡ್ ರೈಟ್ಸ್ ಟ್ರಸ್ಟ್ ಎಂಬ ಮಕ್ಕಳ ಸಹಾಯವಾಣಿಯನ್ನು ನಡೆಸುತ್ತಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿ ತನ್ನ ಕ್ಲಾಸ್ ಮೇಟ್ ಎದುರು ಶಿಕ್ಷಕಿ ತನಗೆ ಬೈದರು ಎಂದು ಹೇಳಿ ಕರೆ ಮಾಡಿದ್ದನು. ಇಲ್ಲಿ ಆ ವಿದ್ಯಾರ್ಥಿ ತುಂಬಾ ಅವಮಾನಗೊಂಡಿದ್ದ ಎಂದು ನಾಗಸಿಂಹ ರಾವ್ ಹೇಳುತ್ತಾರೆ. ತಮ್ಮ ಸಹಪಾಠಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ, ಅವನನ್ನು ಕಾಪಾಡಿ ಎಂದು ಹೇಳಿ ದೂರವಾಣಿ ಕರೆ ಮಾಡುವ ಮಕ್ಕಳು ಇರುತ್ತಾರೆ. ನಗರಗಳಲ್ಲಿ ಮಕ್ಕಳ ಮಾನಸಿಕ ಒತ್ತಡದ ಬಗ್ಗೆ ತಿಳಿದುಕೊಳ್ಳಲು ಸಮಯವಿಲ್ಲದ ತಂದೆ ತಾಯಿಗಳು ಇರುತ್ತಾರೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ ಎನ್ನುತ್ತಾರೆ ನಾಗಸಿಂಹ ರಾವ್.
ದಿನಕ್ಕೆ ಬರುವ ಸುಮಾರು 200 ಕರೆಗಳಲ್ಲಿ ಸುಮಾರು 30 ಕರೆಗಳು ನಿಜಕ್ಕೂ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವ ಮಕ್ಕಳದ್ದಾಗಿರುತ್ತದೆ. ಬಾಲ ಕಾರ್ಮಿಕತೆಗೆ ಸಂಬಂಧಪಟ್ಟ ದೂರುಗಳು ಹೆಚ್ಚಿನದ್ದಾಗಿರುತ್ತದೆ. ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಕರೆಗಳು ಕೂಡ ಬರುತ್ತಿರುತ್ತವೆ ಎಂದು ನಾಗಸಿಂಹ ರಾವ್ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.