ರಾಜ್ಯ

ಬೆಂಗಳೂರು: ಸದ್ಯದಲ್ಲಿಯೇ ರಾಜ್ಯದ ಆಸ್ಪತ್ರೆಗಳಲ್ಲಿ ಸಾವಿನ ವೈದ್ಯಕೀಯ ಇ-ದಾಖಲೆ

ಮುಂದಿನ ಎರಡು-ಮೂರು ತಿಂಗಳಲ್ಲಿ ರಾಜ್ಯದಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಸಾವಿನ ವೈದ್ಯಕೀಯ ದಾಖಲೆಗಳಿಗೆ ಸಹಾಯ...

ಬೆಂಗಳೂರು: ಸದ್ಯದಲ್ಲಿಯೇ ರಾಜ್ಯದ ಆಸ್ಪತ್ರೆಗಳಲ್ಲಿ ಸಾವಿನ ವೈದ್ಯಕೀಯ ಇ-ದಾಖಲೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಸದ್ಯದಲ್ಲಿಯೇ ರಾಜ್ಯದ ಆಸ್ಪತ್ರೆಗಳಲ್ಲಿ ಸಾವಿನ ವೈದ್ಯಕೀಯ ಇ-ದಾಖಲೆ 
ಬೆಂಗಳೂರು: ಮುಂದಿನ ಎರಡು-ಮೂರು ತಿಂಗಳಲ್ಲಿ ರಾಜ್ಯದಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಸಾವಿನ ವೈದ್ಯಕೀಯ ದಾಖಲೆಗಳಿಗೆ ಸಹಾಯ ಮಾಡುವ ಇ-ಮೊರ್ಟಾಲಿಟಿ ಸಾಫ್ಟ್ ವೇರ್ ಜಾರಿಗೆ ಬರಲಿದೆ.
ರಾಷ್ಟ್ರೀಯ ಕಾಯಿಲೆ ಮಾಹಿತಿಗಳ ಕೇಂದ್ರ(ಎನ್ ಸಿಡಿಐ) ಈ ಸಾಫ್ಟ್ ವೇರ್ ನ್ನು ಅಭಿವೃದ್ಧಿಪಡಿಸಿದ್ದು, ಅದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ವ್ಯಕ್ತಿಯ ಸಾವಿಗೆ ಕೂಡ ಕಾರಣವನ್ನು ದಾಖಲೆಯಲ್ಲಿ ಗುರುತಿಸುತ್ತದೆ. ಈ ಸಾಫ್ಟ್ ವೇರ್ ನ ಪ್ರಾಯೋಗಿಕ ಪರೀಕ್ಷೆ ಕಿದ್ವಾಯಿ ಗ್ರಂಥಿಶಾಸ್ತ್ರ ಸ್ಮಾರಕ ಸಂಸ್ಥೆ ಮತ್ತು ವೈದೇಹಿ ಆಸ್ಪತ್ರೆ ನಡೆಸಿದೆ.
ಸಾಫ್ಟ್ ವೇರ್ ನಲ್ಲಿ ದಾಖಲೆಗಳ ಸೇರ್ಪಡೆ, ಅಂತರ್ನಿರ್ಮಿತ ಗುಣಮಟ್ಟದ ಪರೀಕ್ಷೆ, ಹುಡುಕಾಟ ಮತ್ತು ರಫ್ತು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಆಸ್ಪತ್ರೆಗಳು ಈ ಉಚಿತ ಸಾಫ್ಟ್ ವೇರನ್ನು ತರಬೇತಿಯ ಉಪಕರಣವಾಗಿ, ಗ್ರಾಹಕೀಕರಣವಾಗಿ ಕೂಡ ಬಳಸಬಹುದು.
ಎನ್ ಸಿಡಿಐಯ ನಿರ್ದೇಶಕ ಡಾ. ಪ್ರಶಾಂತ್ ಮಾಥುರ್ ಈ ಬಗ್ಗೆ ಮಾಹಿತಿ ನೀಡಿ, ಯೋಜನೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಇಲಾಖೆ ಜೊತೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಇದು ಆರೋಗ್ಯ ಇಲಾಖೆಯಡಿ ಬರುವುದಿಲ್ಲ. ಕೇವಲ ಕ್ಯಾನ್ಸರ್ ಗೆ ಮಾತ್ರವಲ್ಲದೆ ನಾವು ಪ್ರತಿ ಕಾಯಿಲೆಗಳಿಗೆ ಕೂಡ ಇ-ಮೊರ್ಟಾಲಿಟಿಯನ್ನು ಬಳಸಲು ಪ್ರಯತ್ನಿಸುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.