ಜನನ-ಮರಣ ಪ್ರಮಾಣಪತ್ರದ ದರ ಇಳಿಸಿದ ಬಿಬಿಎಂಪಿ
ಜನನ ಮರಣ ಪ್ರಮಾಣ ಪತ್ರಗಳ ಶುಲ್ಕಗಳನ್ನು ಮರು ನಿಗದಿ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ...

Published On :
ಬೆಂಗಳೂರು: ಜನನ ಮರಣ ಪ್ರಮಾಣ ಪತ್ರಗಳ ಶುಲ್ಕಗಳನ್ನು ಮರು ನಿಗದಿ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ.
ನೂತನ ಆದೇಶದಂತೆ ಜನನ ಅಥವಾ ಮರಣ ಸಂಭವಿಸಿದ ದಿನದಿಂದ 21 ದಿನದೊಳಗೆ ನೋಂದಣಿ ಮಾಡಿಸಿದರೆ ಉಚಿತವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ.
22ನೇ ದಿನದಿಂದ 31ನೇ ದಿನದೊಳಗೆ ನೋಂದಣಿ ಮಾಡಿಸಿದರೆ 2 ರೂ., 31ನೇ ದಿನದಿಂದ ಒಂದು ವರ್ಷದೊಳಗೆ ಪಡೆದರೆ 5 ರೂ. ಹಾಗೂ ಒಂದು ವರ್ಷ ಮೇಲ್ಪಟ್ಟು ನೋಂದಣಿಗೆ 10 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಪ್ರಮಾಣ ಪತ್ರಗಳ ವಿತರಣೆಗೆ ಮೊದಲನೆ ವರ್ಷದ ಶೋಧನೆಗಾಗಿ 2 ರೂ. ನಿಗದಿಪಡಿಸಲಾಗಿದ್ದು, ಮುಂದುವರಿಸಿದ ಪ್ರತಿಯೊಂದು ವರ್ಷಕ್ಕೂ ಹೆಚ್ಚುವರಿ 2 ರೂ. ನಿಗದಿ ಮಾಡಲಾಗಿದ್ದು ನವೆಂಬರ್ 1 ರಿಂದಲೇ ಈ ಆದೇಶ ಜಾರಿಗೆ ಬರಲಿದೆ.
ಜತೆಗೆ ಪ್ರತಿ ಜನನ ಪ್ರಮಾಣ ಪತ್ರಕ್ಕೆ 5 ರೂ. ಹಾಗೂ ಅಲಭ್ಯ ಪ್ರಮಾಣ ಪತ್ರ ನೀಡಿಕೆಗಾಗಿ 2 ರೂ. ನಿಗದಿಗೊಳಿಸಲಾಗಿದೆ.
ಪ್ರತಿ ತಿಂಗಳು ಬಿಬಿಎಂಪಿ 15ಸಾವಿರ ಜನನ ಪ್ರಮಾಣ ಪತ್ರ ಹಾಗೂ 5 ಸಾವಿರ ಮರಣ ಪ್ರಮಾಣ ನೀಡುತ್ತದೆ. ಮೊದಲ ಕಾಪಿ ಆಸ್ಪತ್ರೆಯಿಂದ ಉಚಿತವಾಗಿ ದೊರೆಯುತ್ತದೆ, ನಂತರ ಹೆಚ್ಚುವರಿ ಆದೇಶ ಪ್ರತಿಗಳಿಗೆ 50 ರು ನೀಡಬೇಕಿತ್ತು. ಮರಣ ಹಾಗೂ ಜನನ ಪ್ರಮಾಣ ಪತ್ರಗಳಿಗಾಗಿ ಬೆಂಗಳೂರು ಒನ್ ಸೆಂಟರ್ ನಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ.
ಇಲ್ಲಿಯವರೆಗೂ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲು 50 ರು ಪಡೆಯುತ್ತಿದ್ದರು ಈಗ ಅದರ ಬೆಲೆ ಕಡಿಮೆಯಿದ್ದು ಹೊಸ ನೀತಿಯಂತೆ ಕಡಿಮೆ ಬೆಲೆಯಲ್ಲಿ ನೀಡಬೇಕೆಂದು ಬಿಬಿಎಂಪಿ ಆಯುಕ್ತ ಮಂಜು ನಾಥ್ ಪ್ರಸಾದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


