ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕನ ಬಳಿ ಎರಡು ಸಜೀವ ಗುಂಡುಗಳು ಪತ್ತೆ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕನೊಬ್ಬನ ಬಳಿ 22 ನಂಬರ್ ನ ಎರಡು ಸಜೀವ ಗುಂಡುಗಳು ಪತ್ತೆಯಾಗಿವೆ.

Published On :
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕನೊಬ್ಬನ ಬಳಿ 22 ನಂಬರ್ ನ ಎರಡು ಸಜೀವ ಗುಂಡುಗಳು ಪತ್ತೆಯಾಗಿವೆ.
ಬಾದೆ ದಾನೇಶ್ವರ್ ಎನ್ನುವ ವ್ಯಕ್ತಿಯ ಬಳಿ ಈ ಗುಂಡುಗಳು ಪತ್ತೆಯಾಗಿದ್ದು ವಿಮಾನ ನಿಲ್ದಾಣ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಕೆಐಎಎಲ್‍ನಿಂದ ಪುಣೆಗೆ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್‍ಜಿ 424ನಲ್ಲಿ ಪ್ರಯಾಣ ಮಾಡಲು ಬಂದಿದ್ದನು. ಆಗ ನಿರ್ಬಂಧಿತ ಪ್ರದೇಶದಲ್ಲಿ ಹ್ಯಾಂಡ್ ಬ್ಯಾಗ್ ಮುಖಾಂತರ ಗುಂಡುಗಳನ್ನು ಕೊಂಡೊಯ್ಯುತ್ತಿರುವಾಗ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನಿಲ್ದಾಣದಲ್ಲಿ ನಡೆದ ತಪಾಸಣೆಯ ವೇಳೆ ತಪಾಸಣೆ ಮಾಡುವ ವೇಳೆ ಅವನಲ್ಲಿದ್ದ ಅಕ್ರಮ ಗುಂಡುಗಳು ಹಾಗೂ ಕಾಟ್ರಿಡ್ಜ್ ಗಳು ಪತ್ತೆಯಾಗಿದೆ.
ಆರೋಪಿ ದಾನೇಶ್ವರ್ನನ್ನು ವಶಕ್ಕೆ ಪಡೆದ ಪೋಲೀಸರು ಅವನಿಂದ 22 ನಂಬರ್ ನ ಎರಡು ಖಾಲಿ ಕಾಟ್ರಿಡ್ಜ್ ಹಾಗೂ 5.56 ನಂಬರ್‍ನ ಒಂದು ಹೆಡ್ ಪಾರ್ಟ್ ಗಳನ್ನು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಆತನಲ್ಲಿ ಬೇರಾವ ದಾಖಲಾತಿಗಳೂ ಇಲ್ಲದಿರುವುದು ಇನ್ನಷ್ಟು ಆತಂಕಕ್ಕೆ ಎಡೆಮಾಡಿದೆ.
ಘಟನೆ ಸಂಬಂಧ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bangaloreಬೆಂಗಳೂರುಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣKempegowda International Airportlive bulletspassenger in KIAಸಜೀವ ಗುಂಡುಗಳುಕೆಐಎ ಪ್ರಯಾಣಿಕ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


