ರಾಜ್ಯ

ಎರಡು ತಿಂಗಳಲ್ಲಿ ಒಂದು ಕೋಟಿ ಊಟ ಪೂರೈಸಿದ ಇಂದಿರಾ ಕ್ಯಾಂಟೀನ್

ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿ ಎರಡೂವರೆ ತಿಂಗಳಾಗಿದ್ದು ಇದಾಗಲೇ ಒಂದು ಕೋಟಿ ಜನರಿಗೆ ಊಟ ಪೂರೈಸಿದ ದಾಖಲೆಗೆ ಪಾತ್ರವಾಗಿದೆ.

ಎರಡು ತಿಂಗಳಲ್ಲಿ ಒಂದು ಕೋಟಿ ಊಟ ಪೂರೈಸಿದ ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್
Published On :
ಬೆಂಗಳೂರು: ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿ ಎರಡೂವರೆ ತಿಂಗಳಾಗಿದ್ದು ಇದಾಗಲೇ ಒಂದು ಕೋಟಿ ಜನರಿಗೆ ಊಟ ಪೂರೈಸಿದ ದಾಖಲೆಗೆ ಪಾತ್ರವಾಗಿದೆ. ಸಿದ್ದರಾಮಯ್ಯ ಸರ್ಕಾರ ಆಗಸ್ಟ್ 16 ರಂದು ಭಾರೀ ನಿರೀಕ್ಷೆಗಳೊಂದಿಗೆ ಪ್ರಾರಂಭಿಸಿದ ಈ ಕ್ಯಾಂಟೀನ್ ನಲ್ಲಿ 28  ವಿಧಾನಸಭಾ ಕ್ಷೇತ್ರದಲ್ಲಿನ ಬಡವರಿಗೆ ಅಗ್ಗದ ದರದಲ್ಲಿ ಆರೋಗ್ಯಕರ ಊಟ ಮತ್ತು ಉಪಹಾರ ವಿತರಿಸಲಾಗುತ್ತಿದೆ.
ತಂತ್ರಜ್ಞಾನವನ್ನು ಬಳಸುವುದರ ಮೂಲಕ ಸೇವೆಗಳನ್ನು ಉತ್ತಮಗೊಳಿಸಲು ಪ್ರತಿದಿನ ತಯಾರಿಸಲಾಗುವ ಆಹಾರದ ಗುಣಮಟ್ಟ ದ ನಿರಂತರ ಮೇಲ್ವಿಚಾರಣೆಗಾಗಿ ಬೃಅಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಸತತ ಪ್ರಯತ್ನಗಳು ಸಾಗಿದೆ. ಇದುವರೆಗೆ ಒಂದು ಕೋಟಿ ಜನರಿಗೆ ಊಟ ಪೂರೈಸಲು ಸರ್ಕಾರ ಸುಮಾರು 10.50  ಕೋಟಿ ರೂ. ಖರ್ಚು ಮಾಡಿದೆ.
ನಗರದಲ್ಲಿ ಒಂದು ವಾರ್ಡ್ ಗೆ ಒಂದು ಕ್ಯಾಂಟೀನ್ ಎನ್ನುವ ನಿಯಮದೊಡನೆ ಪ್ರಾರಂಭವಾದ ಇಂದಿರಾ ಕ್ಯಾಂಟೀನ್ ಗಾಗಿ ಇದೀಗ ನಗರದಾದ್ಯಂತ ಒಟ್ಟು 15 ಕೇಂದ್ರೀಕೃತ ಅಡುಗೆಮನೆಗಳು ಕಾರ್ಯಾಚರಿಸುತ್ತಿವೆ. ಇದರೊಡನೆ ಇನ್ನೂ ಐದು ಅಡುಗೆ ಮನೆಗಳು ಪ್ರಾರಂಭಕ್ಕೆ ಸಿದ್ದವಾಗಿದೆ. ಇದೀಗ ನಗರದಲ್ಲಿ ಒಟ್ಟು 154 ಇಂದಿರಾ ಕ್ಯಾಂಟೀನ್ ಗಳು ಕಾರ್ಯಾಚರಿಸುತ್ತಿದ್ದು ಸದ್ಯದಲ್ಲೇ ಇನ್ನೂ 17  ಕ್ಯಾಂಟೀನ್ ಗಳು ಬರಲಿದೆ.
ಕೆಲ ವಾರ್ಡ್ ಗಳಲ್ಲಿ ಕ್ಯಾಂಟೀನ್ ಗೆ ಸಾಕಾಗುವಷ್ಟು ಸ್ಥಳಾವಕಾಶವಿಲ್ಲ. ಅಂತಹಾ ಪ್ರದೇಶದಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ. ಒಬ್ಬ ವ್ಯಕ್ತಿಗೆ 300 ಗ್ರಾಂ ಊಟ ಪೂರೈಸಲು ನಿರ್ಧರಿಸಲಾಗಿದೆ. ಇದೇ ವೇಳೆ ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾದಲ್ಲಿ ಇನ್ನೊಂದು ಕೂಪನ್ ಪಡೆಯಬೇಕಾಗುತ್ತದೆ.
ಇನ್ನು ಕ್ಯಾಂಟೀನ್ ಗೆ ಊಟ್, ಉಪಹಾರಗಳನ್ನು ಕಳಿಸುವ ಮುನ್ನ ಅಧಿಕಾರಿಗಳು ಅದರ ಗುಣಮಟ್ಟವನ್ನು ಪರೀಕ್ಷೆ ನಡೆಸಲಿದ್ದಾರೆ. ಇದಾಗಲೇ 3,000 ಕಾರ್ಮಿಕರು, 198 ಆಹಾರ ಪರೀಕ್ಷಕರು, 28 ಮುಖ್ಯ ಅಎಧಿಕಾರಿಗಳು ಇಂದಿರಾ ಕ್ಯಾಂಟೀನ್ ನಿರ್ವಹಣೆಯಲ್ಲಿ ಭಾಗವಹಿಸುತ್ತಿದ್ದಾರೆ. ನಗರದಲ್ಲಿನ ಇಂದಿರಾ ಕ್ಯಾಂಟೀನ್ ಗಳ ಜನಪ್ರಿಯತೆಯನ್ನುಕಂಡ ಆಂದ್ರ ಪೊರದೇಶದ ಐಎ ಎಸ್ ಅಧಿಕಾರಿಗಳು ಆ ರಾಜ್ಯದಲ್ಲಿಯೂ ಇಂತಹಾ ಕ್ಯಾಂಟೀನ್ ತೆರೆಯಲು ಆಸಕ್ತಿ ತೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.