ರಾಜ್ಯ

ಜೀವನ ಪರ್ಯಂತ ಕನ್ನಡ ವಿರೋಧಿಯಾಗಿದ್ದ ಟಿಪ್ಪು ಜಯಂತಿ ಆಚರಿಸುತ್ತಿರುವ ಕರ್ನಾಟಕ ಸರ್ಕಾರ: ಸಂಬಿತ್ ಪಾತ್ರ ವ್ಯಂಗ್ಯ

ಜೀವನಪರ್ಯಂತ ಕನ್ನಡ ವಿರೋಧಿಯಾಗಿದ್ದ ಟಿಪ್ಪು ಜಯಂತಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಆಚರಣೆ ಮಾಡಿಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ ಎಂದು ಬಿಜೆಪಿ ರಾಷ್ಟ್ರೀಯ...

ಜೀವನ ಪರ್ಯಂತ ಕನ್ನಡ ವಿರೋಧಿಯಾಗಿದ್ದ ಟಿಪ್ಪು ಜಯಂತಿ ಆಚರಿಸುತ್ತಿರುವ ಕರ್ನಾಟಕ ಸರ್ಕಾರ: ಸಂಬಿತ್ ಪಾತ್ರ ವ್ಯಂಗ್ಯ
ಸಂಬಿತ್ ಪಾತ್ರ
Published On :
ಬೆಂಗಳೂರು: ಜೀವನಪರ್ಯಂತ ಕನ್ನಡ ವಿರೋಧಿಯಾಗಿದ್ದ ಟಿಪ್ಪು ಜಯಂತಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಆಚರಣೆ ಮಾಡಿಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ನಗರದ ಗಾಂಧಿ ಭವನದಲ್ಲಿ ನ.04 ರಂದು ನಡೆದ ಟಿಪ್ಪು ಹಾಗೂ ಆತನ ಆರಾಧಕರ ಮನಸ್ಥಿತಿಯ ಕುರಿತ ಅರಿವು ಸೆಮಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಭಯೋತ್ಪಾದಕರಾದ ಒಸಾಮಾ ಬಿನ್ ಲ್ಯಾಡನ್, ಹಫೀಜ್ ಸಯೀದ್ ನ್ನು ಗೌರವಯುತವಾಗಿ ಸಂಬೋಧಿಸುತ್ತದೆ. ಭಯೋತ್ಪಾದಕರನ್ನು ಹತ್ಯೆ ಮಾಡಿದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾತ್ರಿ ಇಡೀ ಕಣ್ಣೀರುಡುತ್ತಾರೆ. ಅದೇ ರೀತಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಜೀವನಪರ್ಯಂತ ಕನ್ನಡವನ್ನು ದ್ವೇಷಿಸಿ, ಪರ್ಷಿಯನ್ ಭಾಷೆಯನ್ನು ಸುಂದರವಾದ ಕನ್ನಡದ ಸಂಸ್ಕೃತಿಯ ಮೇಲೆ ಹೇರಿದ್ದವನ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆ ಮಾಡಿಸುತ್ತಿದೆ ಎಂದು ಟೀಕಿಸಿದ್ದಾರೆ.
300 ವರ್ಷಗಳ ನಂತರ ಟಿಪ್ಪು ಜಯಂತಿ ಮಾಡಬೇಕೆಂದು ನೆನಪಾಗಿದೆ, ಆದರೆ ಟಿಪ್ಪು ಜಯಂತಿ ಬೇಕು ಎಂದು ಯಾರು ಕೇಳುತ್ತಿದ್ದಾರೆ? ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ನಲ್ಲಿಯೇ ಹಲವರಿಗೆ ಅಸಮಾಧಾನವಿದೆ. ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಬರೊಬ್ಬರಿ 8000 ದೇವಾಲಯ ನಾಶ ಮಾಡಿದ್ದ, ಟಿಪ್ಪು ಸಾಯುವವರೆಗೂ ಕೇವಲ 2 ದೇವಾಲಯಗಳಲ್ಲಿ ಮಾತ್ರ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ದೇವಾಲಯಗಳನ್ನು ನಾಶ ಮಾಡಿರುವುದರ ಬಗ್ಗೆ ಮೈಸೂರು ಗೆಝೆಟ್ ನಲ್ಲಿ ಉಲ್ಲೇಖಗಳಿವೆ, ಇವೆಲ್ಲವೂ ಸಿದ್ದರಾಮಯ್ಯನವರಿಗೆ ತಿಳಿದಿಲ್ಲ ಎಂದಲ್ಲ ಆದರೆ ಭ್ರಾತೃತ್ವದ ಭಾವನೆಯಿಂದ ಜೀವಿಸುತ್ತಿದ್ದ ಹಿಂದೂ ಮುಸ್ಲಿಮರನ್ನು ಒಡೆದು ಆಳಲು, ಓಟ್ ಬ್ಯಾಂಕ್ ನ್ನು ಭದ್ರಪಡಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಸಂಬಿತ್ ಪಾತ್ರ ಹೇಳಿದರು.
ಲೇಖಕರು, ಇತಿಹಾಸ ಸಂಶೋಧಕರೂ ಆದ ಸಂದೀಪ್ ಬಾಲಕೃಷ್ಣ, ಜಿಬಿ ಹರೀಶ್, ಕಾರ್ಯಕ್ರಮ ಆಯೋಜಿಸಿದ್ದ ಫಸ್ಟ್ ಸಂಸ್ಥೆಯ ಜಿ.ಆರ್. ಸಂತೋಷ್ ಲೇಖಕ ರಾಬರ್ಟ್ ರೊಸಾರಿಯೋ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.