ರಾಜ್ಯ

ಹೌದು, ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ: ದಿನೇಶ್ ಗುಂಡೂರಾವ್

ಹೌದು, ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದು, ಈ ಮೂಲಕ ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ...

ಹೌದು, ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ: ದಿನೇಶ್ ಗುಂಡೂರಾವ್
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್
Published On :

ಬೆಂಗಳೂರು: ಹೌದು, ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದು, ಈ ಮೂಲಕ ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ. 

ನಟ ಕಮಲ್ ಹಾಸನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾನೂನನ್ನು ಕೈಗೆತ್ತಿಕೊಳ್ಳುವವಲು ಹಾಗೂ ಜನರನ್ನು ಭಯಪಡಿಸುವವರೂ ಕೂಡ ಭಯೋತ್ಪಾದಕರೇ ಎಂದು ಹೇಳಿದ್ದಾರೆ. 

ಹೌದು, ದೇಶದಲ್ಲಿ ಹಿಂದೂ ಭಯೋತ್ರಾದನೆ ಇದೆ. ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದ ಕೂಡ ಒಬ್ಬ ಹಿಂದೂ ಭಯೋತ್ಪಾದಕನೇ...ದಲಿತರನ್ನು ಹತ್ಯೆ ಮಾಡುವವರು, ದಲಿತರನ್ನು ಹೊಡೆಯುವವರು ಹಾಗೂ ಎಲ್ಲಾ ಗೋರಕ್ಷಕರೂ ಕೂಡ ಹಿಂದೂ ಭಯೋತ್ಪಾದಕರೇ ಆಗಿದ್ದಾರೆ. ಜನರನ್ನು ಭಯಪಡಿಸುವ ಕೆಲ ಜನರಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ಜನರು, ತಮ್ಮದೇ ಸಿದ್ಧಾಂತಗಳನ್ನು ಹೊಂದಿ ಸ್ವತಃ ತಾವೇ ಕ್ರಮಗಳನ್ನು ಕೈಗೊಳ್ಳುವವರೂ ಕೂಡ ಭಯೋತ್ಪಾದಕರೇ ಆಗಿದ್ದಾರೆಂದು ತಿಳಿಸಿದ್ದಾರೆ. 

ದೇಶದಲ್ಲಿ ಮೂಲಭೂತವಾದವೆಂಬುದು ಇದ್ದು, ನಾವು ಇದನ್ನು ಕಂಡು ಓಡಿ ಹೋಗುವುದಲ್ಲ. ಅದನ್ನು ಎದುರಿಸಬೇಕು ಎಂದಿದ್ದಾರೆ. 

ಬಲ ಪಂಥೀಯ ಯಾವುದೇ ಹಿಂದೂ ಸಂಘಟನೆಗೆ ಬಿಜೆಪಿ ಬೆಂಬಲ ನೀಡುತ್ತದೆ. ಎಡಪಂಧೀಯ ಅಥವಾ ಇತರೆ ಹಿಂದೂ ಸಂಘಟನೆಗಳನ್ನೂ ವಿರೋಧಿಸುತ್ತಾರೆ. ಗೋರಕ್ಷಕರನ್ನು ಬೆಂಬಲಿಸುತ್ತಾರೆ. ಕಮಲ್ ಹಾಸನ್ ಅವರ ಹೇಳಿಕೆ ಸರಿಯಿದೆ. ದೇಶದಲ್ಲಿ ಹಿಂದೂ ಭಯೋತ್ಪಾದಕರಿರುವುದಂತೂ ಸತ್ಯವಲ್ಲವೇ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.