ಸೆಮಿನಾರ್ ಗಳಿಗಾಗಿ ವಿದೇಶಕ್ಕೆ ತೆರಳುವ ಪ್ರಾಧ್ಯಾಪಕರಿಗೆ ಹೊಸ ನಿಯಮ
ಸೆಮಿನಾರ್ ಗಳಲ್ಲಿ ಭಾಗವಹಿಸುವುದಕ್ಕಾಗಿ ವಿದೇಶಕ್ಕೆ ತೆರಳುವ ಪ್ರಾಧ್ಯಾಪಕರುಗಳು ಇನ್ನು ಮುಂದೆ ಒಂದಷ್ಟು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

Published On :
ಬೆಂಗಳೂರು: ಸೆಮಿನಾರ್ ಗಳಲ್ಲಿ ಭಾಗವಹಿಸುವುದಕ್ಕಾಗಿ ವಿದೇಶಕ್ಕೆ ತೆರಳುವ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರುಗಳು ಇನ್ನು ಮುಂದೆ ಒಂದಷ್ಟು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಕಾಲೇಜು ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ರೂಪಿಸಿದ್ದು, ಪ್ರಾಧ್ಯಾಪಕರುಗಳು ಭಾಗವಹಿಸುತ್ತಿರುವ ಸೆಮಿನಾರ್ ಹೆಸರು, ದೇಶ ಸೇರಿದಂತೆ ವಿದೇಶ ಪ್ರವಾಸದ ಪ್ರತಿಯೊಂದು ಮಾಹಿತಿಯನ್ನೂ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಸೆಮಿನಾರ್ ಗಳಿಗೆ ಭಾಗವಹಿಸುವುದರ ಬಗ್ಗೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವನ್ನು ಸೇರಿಸಲಾಗಿದೆ.
ಇಲಾಖೆಯ ವೆಬ್ ಸೈಟ್ ನಲ್ಲಿ ಹೊಸ ನಿಯಮಗಳ ಪಟ್ಟಿಯನ್ನು ಅಪ್ ಲೋಡ್ ಮಾಡಲಾಗಿದ್ದು, ವಿದೇಶ ಪ್ರವಾಸ ಕೈಗೊಂಡ ಪ್ರಾಧ್ಯಾಪಕರು ವಿದೇಶದಿಂದಲೇ ರಾಜೀನಾಮೆ ನೀಡುವಂತಿಲ್ಲ, ವಿದೇಶ ಪ್ರವಾಸದ ಅವಧಿಯನ್ನು ಅನಗತ್ಯವಾಗಿ ವಿಸ್ತರಿಸುವಂತಿಲ್ಲ ಎಂಬ ನಿಯಮಗಳನ್ನು ಸೇರಿಸಲಾಗಿದೆ. ಅಷ್ಟೇ ಅಲ್ಲದೇ ಅವರ ಸ್ವಂತ ಖರ್ಚು-ವೆಚ್ಚದಲ್ಲಿ ವಿದೇಶ ಪ್ರವಾಸ ಕೈಗೊಂಡರೆ ಅದರ ಸಂಪೂರ್ಣ ವಿವರವನ್ನೂ ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
State Governmentರಾಜ್ಯ ಸರ್ಕಾರlecturersabroadವಿದೇಶ ಪ್ರವಾಸಹೊಸ ನಿಯಮಪ್ರಾಧ್ಯಾಪಕರುnew rulesseminarsಸೆಮಿನಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


