ಕರ್ನಾಟಕ ಹೈಕೋರ್ಟ್ ನಲ್ಲಿ ಚಿದಂಬರಂ: ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಣೆ
ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ತಮ್ಮ ಹಾಗೂ ತಮ್ಮ ಪುತ್ರನಿಗೆ ಸೇರಿದ ಆಸ್ತಿಗಳ ಮೇಲೆ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು...

Published On :
ಬೆಂಗಳೂರು: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ತಮ್ಮ ಹಾಗೂ ತಮ್ಮ ಪುತ್ರನಿಗೆ ಸೇರಿದ ಆಸ್ತಿಗಳ ಮೇಲೆ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಖಾಸಗಿ ಕಂಪೆನಿಯ ಪರವಾಗಿ ವಾದ ಮಾಡಲು ಬೆಂಗಳೂರಿನಲ್ಲಿರುವ ಹೈಕೋರ್ಟ್ ಗೆ ಚಿದಂಬರಂ ನಿನ್ನೆ ಹಾಜರಾಗಿದ್ದರು. ಈ ವೇಳೆ ಸಿಬಿಐ ದಾಳಿಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಖಾಸಗಿ ಕಂಪನಿಯ ಪರ ವಾದ ಮಾಡಲು ನಾನಿಲ್ಲಿ ವಕೀಲನಾಗಿ ಬಂದಿದ್ದೇನೆ, ದಯವಿಟ್ಟು ನನ್ನನ್ನು ಏನು ಕೇಳಬೇಡಿ ಎಂದಷ್ಟೇ ಹೇಳಿದರು.
ಕಾರ್ಮಿಕ ಕಾಯ್ದೆ ಉಲ್ಲಂ ಘನೆ ಆರೋಪದಡಿ ಕನಕಪುರ ರಸ್ತೆಯ ಕೋಣನಕುಂಟೆಯಲ್ಲಿರುವ ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ ಇಂಡಿಯಾ ಖಾಸಗಿ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಜಾರಿ ಮಾಡಲಾಗಿರುವ ಜಾಮೀನು ರಹಿತ ಬಂಧನ ವಾರಂಟ್ ರದ್ದುಗೊಳಿಸಬೇಕು ಎಂದು ಕೋರಿ ಹಿರಿಯ ವಕೀಲ ಪಿ.ಚಿದಂಬರಂ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಹಾಜರಾಗಿ ವಾದ ಮಂಡಿಸಿದರು.
ನ್ಯಾಯಮೂರ್ತಿ ಎಸ್.ಮುದಗಲ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠದ ಎದುರು ಹಾಜರಾದ ಅವರು, ‘ಅಧೀನ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸುವ ಮುನ್ನ ಸೂಕ್ತ ವಿಧಾನಗಳನ್ನು ಅನುಸರಿಸಿಲ್ಲ. ಅರ್ಜಿದಾರರಿಗೆ ಸಮನ್ಸ್ ಜಾರಿಯೇ ಆಗಿಲ್ಲ. ಒಂದು ವೇಳೆ ಅರ್ಜಿದಾರರು ಕೋರ್ಟ್‌ಗೆ ಹಾಜರಾದರೆ ಅವರನ್ನು ಬಂಧಿಸುವ ಭೀತಿ ಇದೆ’ ಎಂದರು.
ಚಿದಂಬರಂ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಕೊಟ್ರವ್ವ, ‘ವಾದ ಮಾಡಲು ನೀವು ಇಲ್ಲಿ ಹಾಜರಾಗಿರುವುದು ಸಂತೋಷದ ವಿಷಯ. ಆದರೂ ಈಗಾಗಲೇ ಸಮಯ 5 ಗಂಟೆಯಾಗಿದೆ. ಏಕೆ ಇಷ್ಟೊಂದು ಅವಸರ? ಪಟ್ಟಿಯಲ್ಲಿ ನಮೂದಾಗಿರುವ ದಾವೆಗಳ ಸಂಖ್ಯೆ ಸರದಿ ಅನುಸಾರವೇ ನಿಮ್ಮ ಅರ್ಜಿಯನ್ನೂ ವಿಚಾರಣೆ ನಡೆಸಲಾಗುವುದು ಎಂದು ಹೇಳಿ ಮುಂದಿನ ವಾರಕ್ಕೆ ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


