ರಾಜ್ಯ

ಮಾಯಸಂದ್ರ ಕೆರೆಗೆ ಕಾಂಕ್ರೀಟ್ ತ್ಯಾಜ್ಯ ವರದಿ: ಸ್ಥಳಕ್ಕೆ ಬಿಎಂಆರ್ ಸಿಎಲ್ ಅಧಿಕಾರಿಗಳ ಭೇಟಿ

ಮೆಟ್ರೋ ರೈಲ್ ಕಾರ್ಪ್ ಮಾಯಸಂದ್ರ ಕೆರೆಗೆ ಕಾಂಕ್ರೀಟ್ ತ್ಯಾಜ್ಯ ಸುರಿಯುತ್ತಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಯಸಂದ್ರ ಕೆರೆಗೆ ಕಾಂಕ್ರೀಟ್ ತ್ಯಾಜ್ಯ ವರದಿ: ಸ್ಥಳಕ್ಕೆ ಬಿಎಂಆರ್ ಸಿಎಲ್ ಅಧಿಕಾರಿಗಳ ಭೇಟಿ
ಕಾಂಕ್ರೀಟ್ ತ್ಯಾಜ್ಯ
Published On :
ಬೆಂಗಳೂರು: ಮೆಟ್ರೋ ರೈಲ್ ಕಾರ್ಪ್ ಮಾಯಸಂದ್ರ ಕೆರೆಗೆ ಕಾಂಕ್ರೀಟ್ ತ್ಯಾಜ್ಯ ಸುರಿಯುತ್ತಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೆಟ್ರೋ ಫೇಸ್-II  ರ ಕಾಮಗಾರಿಯ ಕಾಂಕ್ರೀಟ್ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿರುವುದರ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿರುವ ಬಿಎಂಆರ್ ಸಿಎಲ್ ವಕ್ತಾರ ವಸಂತ್ ರಾವ್ ಈ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳಿಂದ ವರದಿ ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 
ಕೆರೆಯ ಬಳಿ ಹಾಗೂ ಬಫರ್ ಜೋನ್ ಗಳ ಬಳಿ ಒಣ ಅಥವಾ ಹಸಿ ತ್ಯಾಜ್ಯ ಸುರಿಯುವವರಿಗೆ 5 ಲಕ್ಷ ದಂಡ ವಿಧಿಸುವುದಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್ ಸಿಡಿಎ) ಎಚ್ಚರಿಕೆ ನೀಡಿದ್ದರೂ ಸಹ ಮಾಯಸಂದ್ರ ಕೆರೆಯ ಬಳಿ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯಲಾಗುತ್ತಿರುವುದರ ಬಗ್ಗೆ ಮೇ.09 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.