ರಾಜ್ಯ

ನೀರಿನ ಗುಣಮಟ್ಟ ಸೂಚ್ಯಂಕ: ರಾಜ್ಯದ 71 ಕೆರೆಗಳ ನೀರು ಮಲಿನ

ಕಲುಷಿತಗೊಂಡಿರುವುದು ಕೇವಲ ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು...

ನೀರಿನ ಗುಣಮಟ್ಟ ಸೂಚ್ಯಂಕ: ರಾಜ್ಯದ 71 ಕೆರೆಗಳ ನೀರು ಮಲಿನ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕಲುಷಿತಗೊಂಡಿರುವುದು ಕೇವಲ ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಮಾತ್ರವಲ್ಲ. ನಮ್ಮ ರಾಜ್ಯದ 77 ಕೆರೆಗಳಲ್ಲಿ 71 ಕೆರೆಗಳ ನೀರಿನ ಗುಣಮಟ್ಟ ಸೂಚ್ಯಂಕ ಪರೀಕ್ಷೆ ನಡೆಸಲಾಗಿದ್ದು ಅವುಗಳ ಫಲಿತಾಂಶ ಅತೃಪ್ತಿಕರವಾಗಿದೆ. ಈ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಪ್ರಕಾರ, ಕೆಎಸ್ ಪಿಸಿಬಿ ರಾಜ್ಯದ ಕೆರೆ ಮತ್ತು ಟ್ಯಾಂಕುಗಳ ನೀರಿನ ಗುಣಮಟ್ಟ ಸೂಚ್ಯಂಕ ಪರೀಕ್ಷೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುತ್ತದೆ.
ಇತ್ತೀಚೆಗೆ ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ನಡೆಸಲಾದ ಪರೀಕ್ಷೆ ಪ್ರಕಾರ ಕರ್ನಾಟಕದ 77 ಕೆರೆಗಳ ಪರೀಕ್ಷೆ ನಡೆಸಲಾಯಿತು. ಅವುಗಳಲ್ಲಿ ಎರಡು ಕೆರೆಗಳು ರಾಯಚೂರು, ಎರಡು ದಾವಣಗೆರೆ, ತಲಾ ಒಂದೊಂದು ಕೆರೆಗಳು ವಿಜಯಪುರ ಮತ್ತು ಮಂಗಳೂರುಗಳನ್ನು ಒಳಗೊಂಡಿತ್ತು. ಆಸಕ್ತಿಕರ ವಿಷಯವೆಂದರೆ 77 ಕೆರೆಗಳಲ್ಲಿ 38 ಕೆರೆಗಳು ಬೆಂಗಳೂರಿನದ್ದಾಗಿವೆ. 
ನೀರಿನ ಗುಣಮಟ್ಟ ನಿರ್ವಹಣೆ ವ್ಯವಸ್ಥೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅತಿದೊಡ್ಡ ಅಂಗವಾಗಿದೆ. ಅದರ ಮಾರ್ಗಸೂಚಿ ಪ್ರಕಾರ, ಕೆರೆಗಳಿಂದ ನೀರಿನ ಮಾದರಿಯನ್ನು ತೆಗೆದುಕೊಂಡು ಕಾಲಿಫಾರ್ಮ್ಸ್,  ಪಿಎಚ್, ಬಯೋಕೆಮಿಕಲ್ ಆಕ್ಸಿಜನ್ ಮತ್ತು ಇತರ ರಾಸಾಯನಿಕಗಳನ್ನು ಬಳಸಿ ಪರೀಕ್ಷೆ ನಡೆಸಲಾಗುತ್ತದೆ. ಇವುಗಳ ಆಧಾರದಲ್ಲಿ ಎ,ಬಿ,ಸಿ,ಡಿ ಮತ್ತು ಇ ಶ್ರೇಣಿಯನ್ನು ನೀಡಲಾಗುತ್ತಿದ್ದು ಎ ವಿಭಾಗದ ಸರೋವರ/ಟ್ಯಾಂಕ್ ಗಳ ನೀರು ಉತ್ತಮ ಮತ್ತು ಕುಡಿಯಲು ಯೋಗ್ಯವೆಂದೂ ಇ ವಿಭಾಗದ ನೀರು ಅತ್ಯಂತ ಮಾಲಿನ್ಯವಾಗಿದ್ದು ಕುಡಿಯಲು ಮತ್ತು ಇನ್ನಿತರ ನಿತ್ಯ ಬಳಕೆಗೆ ಕೂಡ ಯೋಗ್ಯವಲ್ಲ ಎಂದು ವರ್ಗೀಕರಿಸಲಾಗುತ್ತದೆ ಎಂದು ಕೆಎಸ್ ಪಿಸಿಬಿ ಅಧಿಕಾರಿಗಳು ಹೇಳುತ್ತಾರೆ.
ವರದಿ ಸಿಕ್ಕಿದ ತಕ್ಷಣ ಬೆಂಗಳೂರಿನಲ್ಲಿ ಬಿಬಿಎಂಪಿ, ಬಿಡಿಎ ಅಥವಾ ಬಿಡಬ್ಲ್ಯುಎಸ್ಎಸ್ ಬಿ, ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಕೆರೆ, ಸರೋವರ, ಟ್ಯಾಂಕುಗಳ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ನೊಟೀಸ್ ನೀಡಲಾಗುವುದು ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ರೀತಿಯ ತ್ಯಾಜ್ಯಗಳನ್ನು ಕೆರೆ, ಸರೋವರಗಳಿಗೆ ಬಿಡುವುದರಿಂದ ನೀರು ಬಹುಬೇಗನೆ ಮಲಿನವಾಗುತ್ತದೆ. ಈ ತ್ಯಾಜ್ಯಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕವಿರುತ್ತದೆ.  ಇದು ಮಾನವ ಮತ್ತು ಪ್ರಾಣಿಗಳ ಶರೀರಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಪರಿಸರವಾದಿ ಎ.ಎನ್.ಯೆಲ್ಲಪ್ಪ ರೆಡ್ಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.