ರಾಜ್ಯ

ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ-ಕಾರಿಗೆ ಡಿಕ್ಕಿ: ಕಲಬುರಗಿ ಡಿಸಿ ಕೂದಲೆಳೆ ಅಂತರದಲ್ಲಿ ಪಾರು

ಅಕ್ರಮವಾಗಿ ಗಣಿಗಾರಿಕೆ ಮರಳು ಹೊತ್ತು ಸಾಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದು ಐಎಎಸ್ ಅಧಿಕಾರಿ...

ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ-ಕಾರಿಗೆ ಡಿಕ್ಕಿ: ಕಲಬುರಗಿ ಡಿಸಿ ಕೂದಲೆಳೆ ಅಂತರದಲ್ಲಿ ಪಾರು
ಕಲಬುರಗಿ ಡಿಸಿ ಉಜ್ವಲ್ ಕುಮಾರ್
Published On :
ಕಲಬುರಗಿ: ಅಕ್ರಮವಾಗಿ ಗಣಿಗಾರಿಕೆ ಮರಳು ಹೊತ್ತು ಸಾಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದು ಐಎಎಸ್ ಅಧಿಕಾರಿ ಉಜ್ವಲ್ ಘೋಷ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮೊನ್ನೆ ಶನಿವಾರ ಬೆಳಗ್ಗೆ ಚಿತ್ತಾಪುರ ತಾಲ್ಲೂಕಿನ ದಂಡೊತಿ ಗ್ರಾಮದಲ್ಲಿ ನಡೆದಿದೆ. 
2008ರ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಉಜ್ವಲ್ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದಾರೆ. ಅಪಘಾತದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಉಜ್ವಲ್ ಘೋಷ್, ದಂಡೊತಿ ಗ್ರಾಮದ ಕಾಗಿನ ನದಿ ದಂಡೆಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ಸುದ್ದಿ ತಿಳಿದು ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಾಗಿನ ನದಿ ದಂಡೆಗೆ ಸೇಡಂ ಜಿಲ್ಲಾಧಿಕಾರಿ ಭೀಮಶಂಕರ್ ಮತ್ತು ಅವರ ಬಂದೂಕುಧಾರಿ ಜೊತೆ ತೆರಳಿದ್ದೆ. ಅಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. 
ಮೊನ್ನೆ ಲಾರಿಗೆ ಮರಳು ತುಂಬಿಸುವಾಗ ನಮ್ಮ ಗನ್ ಮ್ಯಾನ್ ಬೊಬ್ಬೆ ಹಾಕಿದ. ಆಗ ಲಾರಿ ಚಾಲಕ ತಪ್ಪಿಸಿಕೊಂಡು ಹೋಗಲು ಲಾರಿಯನ್ನು ವೇಗವಾಗಿ ಓಡಿಸಿದ. ಇನ್ನೇನು ನಮ್ಮ ಕಾರಿಗೆ ಬಂದು ಹೊಡೆಯುತ್ತದೆ ಎನ್ನುವಷ್ಟರಲ್ಲಿ, ನಮ್ಮ ಕಾರಿನ ಚಾಲಕ ಕಾರನ್ನು ಬದಿಗೆ ಒಯ್ದದ್ದರಿಂದ ಆತನ ಸಮಯ ಪ್ರಜ್ಞೆಯಿಂದಾಗಿ ಅಪಘಾತ ತಪ್ಪಿಹೋಯಿತು ಎಂದು ವಿವರಿಸಿದರು.
ಚಿತ್ತಾಪುರ ತಹಸೀಲ್ದಾರ್ ಕೇಸು ದಾಖಲಿಸಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.