ರಾಜ್ಯ

ಬಿಬಿಎಂಪಿ ಬಜೆಟ್ 2017: ಬೆಂಗಳೂರಿನ ಕಸ ನಿರ್ವಹಣೆಗೆ 751 ಕೋಟಿ ಮೀಸಲು

ಸಿಲಿಕಾನ್ ಸಿಟಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 2017ರ...

ಬಿಬಿಎಂಪಿ ಬಜೆಟ್ 2017: ಬೆಂಗಳೂರಿನ ಕಸ ನಿರ್ವಹಣೆಗೆ 751 ಕೋಟಿ ಮೀಸಲು
ಬಿಬಿಎಂಪಿ
Published On :
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 2017ರ ಬಜೆಟ್ ಮಂಡಿಸಿದೆ. 
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ ಗುಣಶೇಖರ್ ಅವರು 9241 ಕೋಟಿ ರುಪಾಯಿ ಯೋಜನಾ ಗಾತ್ರವನ್ನು ಮಂಡಿಸಿದರು. 
2017-18ರ ಬಿಬಿಎಂಪಿ ಆಯವ್ಯಯದ ಪ್ರಮುಖ ಅಂಶಗಳು
* ಉದ್ಯಾನನಗರಿಯ ಸ್ವಚ್ಛತೆಗೆ ಮೊದಲ ಆದ್ಯತೆ. 
* ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು. 
* ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 89.50 ಕೋಟಿ ರುಪಾಯಿ.
* 19 ಲಕ್ಷ ಮನೆಗಳಿಗೆ ಡಿಜಿಟಲ್ ಮನೆ ಸಂಖ್ಯೆ. 
*  ಜಾಹಿರಾತು ಮತ್ತು ತೆರಿಗೆಯಿಂದ ಬಂದ ಆದಾಯ 82.50 ಕೋಟಿ ರುಪಾಯಿ.
* ಲೆಕ್ಕಪತ್ರ ನಿರ್ವಹಣೆಗೆ ಇ-ಆಡಳಿತ
* ಬೆಂಗಳೂರಿನ ಕಸ ನಿರ್ವಹಣೆಗೆ 751 ಕೋಟಿ ಮೀಸಲು. 198 ವಾರ್ಡ್ ಗಳಲ್ಲಿಯೂ ಚಿಂದಿ ಆಯುವವರ ನೇಮಕ. ಕಂಡ ಕಂಡಲ್ಲಿ ಕಸ ಸುರಿಯೋದನ್ನು ತಪ್ಪಿಸಲು ಮಾರ್ಷಲ್ ಗಳ ನೇಮಕ
* ಎಲ್ಲಾ ವಾರ್ಡ್ ಗಳಲ್ಲಿ ಕಾಂಪೋಸ್ಟ್ ಸಂತೆ ನಡೆಸಲು ನಿರ್ಧಾರ
* ಪ್ರತಿ ಮನೆಗೆ 2 ಕಸದ ಬುಟ್ಟಿ, 1 ಚೀಲ ವಿತರಿಸಲು 5 ಕೋಟಿ ಮೀಸಲು. 
* ಪ್ರತಿ ವಾರ್ಡ್ ಗೆ 50 ಬೈಸಿಕಲ್ ವಿತರಿಸಲು 4 ಕೋಟಿ ಮೀಸಲು
* ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ಮೀಸಲು
* ಸಂಚಾರಿ ಆರೋಗ್ಯ ಘಟಕಕ್ಕೆ 3 ಕೋಟಿ. 
* ನಗರದ 3 ಕಡೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.