ಬೆಂಗಳೂರು: ಜೆಡಿಎಸ್ ಸಮಾವೇಶದಿಂದಾಗಿ 8 ತಾಸು ಟ್ರಾಫಿಕ್ ಕಿರಿಕಿರಿ
ಟ್ರಾಫಿಕ್ ಸಮಸ್ಯೆಯಿಂದಾಗಿ ಸಿಲಿಕಾನ್ ಸಿಟಿ ಬಹಳಷ್ಟು ಫೇಮಸ್ ಆಗಿದೆ. ಗುರುವಾರ ನಡೆದ ಜೆಡಿಎಸ್ ರ್ಯಾಲಿಯಿಂದ ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆ ...

ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದಾಗಿ ಸಿಲಿಕಾನ್ ಸಿಟಿ ಬಹಳಷ್ಟು ಫೇಮಸ್ ಆಗಿದೆ. ಗುರುವಾರ ನಡೆದ ಜೆಡಿಎಸ್ ರ್ಯಾಲಿಯಿಂದ ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಅನಾವರಣಾಗೊಂಡಿದೆ.
ಅರಮನೆ ಮೈದಾನಕ್ಕೆ ವಿವಿಧ ಜಿಲ್ಲೆಗಳಿಂದ ಸಮಾವೇಶದಲ್ಲಿ ಭಾಗವಹಿಸಲು ಬಸ್ ಗಳಲ್ಲಿ ಆಗಮಿಸಿದ್ದ ಜನರಿಂದಾಗಿ ಸುಮಾರು 8 ತಾಸುಗಳ ಕಾಲ ನಿಧಾನಗತಿಯ ಸಂಚಾರದಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಬೆಳಗ್ಗೆ 9.30ಕ್ಕೆ ಆರಂಭವಾದ ಟ್ರಾಫಿಸ್ ಸಮಸ್ಯೆ ಸಂಜೆ 5.30 ರವರೆಗೂ ಮುಂದುವರಿದಿತ್ತು.
ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾದ್ದರಿಂದ ಆ್ಯಂಬುಲೆನ್ಸ್ ಪ್ರಯಾಣಕ್ಕೆ ಕೂಡ ಕೆಲ ಕಾಲ ಅಡ್ಡಿಯುಂಟಾಯಿತು. ಬಳ್ಳಾರಿ ರಸ್ತೆ, ಪ್ಯಾಲೇಸ್ ರೋಡ್, ಜಯಮಲಹ್ ರಸ್ತೆಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಜೆಡಿಎಸ್ ಪಕ್ಷದ ಕಟೌಟ್ ಗಳು ಉರುಳಿ ಕೆಲ ಕಡೆ ರಸ್ತೆಗೆ ಬಿದ್ದಿದ್ದವು, ವಾಹನ ಸವಾರರು ಸಣ್ಣ ಪುಟ್ಟರಸ್ತೆಗಳಲ್ಲಿ ಸಾಗಲು ಹರಸಾಹಸ ಪಡುತ್ತಿದ್ದರು. ಫ್ರೀಡಂ ಪಾರ್ಕ್ ಬಳಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಕೂಡ ಮತ್ತಷ್ಟು ಟ್ರಾಫಿಕ್ ಸಮಸ್ಯೆಗೆ ಕಾರಣವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


