ರಾಜ್ಯ

ಅವಹೇಳನಕಾರಿ ಹೇಳಿಕೆ: ಸಂಸದ ಪ್ರತಾಪ್ ಸಿಂಹ ವಿರುದ್ದ ಕಾರ್ಯಕರ್ತೆ ಪ್ರಭಾ ಬೆಳವಂಗಲ ದೂರು ದಾಖಲು

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ವಿರುದ್ಧ ಪ್ರಗತಿ ಪರ ಚಿಂತಕಿ ಪ್ರಭಾ ಬೆಳವಂಗಲ ದೂರು ದಾಖಲಿಸಿದ್ದಾರೆ.

ಅವಹೇಳನಕಾರಿ ಹೇಳಿಕೆ: ಸಂಸದ ಪ್ರತಾಪ್ ಸಿಂಹ ವಿರುದ್ದ ಕಾರ್ಯಕರ್ತೆ ಪ್ರಭಾ ಬೆಳವಂಗಲ ದೂರು ದಾಖಲು
ಪ್ರತಾಪ್ ಸಿಂಹ ಮತ್ತು ಪ್ರಭಾ ಬೆಳವಂಗಲ
Published On :

ಬೆಂಗಳೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ವಿರುದ್ಧ ಕಾರ್ಯಕರ್ತೆ ಮತ್ತು ಪ್ರಗತಿ ಪರ ಚಿಂತಕಿ ಪ್ರಭಾ ಬೆಳವಂಗಲ ದೂರು ದಾಖಲಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಿರುದ್ಧ ಅಶ್ಲೀಲ ಪೋಸ್ಟ್ ಹಾಕಿದ್ದ ಚಿಂತಕಿ ಪ್ರಭಾ ಬೆಳವಂಗಲ ವಿರುದ್ಧ ಬಿಜೆಪಿ ಯುವ ಮೋರ್ಚಾ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು.

ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಭಾ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದಾರೆ.

ಪ್ರತಾಪ್ ಸಿಂಹ್ ವಿಡಿಯೋ ಒಂದರಲ್ಲಿ ತಮ್ಮನ್ನು ಅವಹೇಳನ ಮಾಡಿದ್ದಾರೆ ಎಂದು ಪ್ರಭಾ ದೂರಿದ್ದಾರೆ. ಪ್ರಭಾ ವಿರುದ್ಧ ನಾನು 100 ದೂರುಗಳನ್ನು ದಾಖಲಿಸಬಲ್ಲೆ, ಕೆಟ್ಟ ವಿಡಿಯೋ ನೋಡಬೇಕೆಂಬ ಬಯಕೆಯಿದ್ದರೇ ಪ್ರಭಾ ಅವರು ಉತ್ತರ ಪ್ರದೇಶದವರೆಗೂ ಹೋಗುವ ಅವಶ್ಯಕತೆಯಿರಲಿಲ್ಲ, ಬಾಗಲಕೋಟೆಗೆ ಹೋಗಿದ್ದರೇ ಸಾಕಾಗಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ರಾಜಕಾರಣಿಗಳ ಆ್ಯಂಟಿಚೇಂಬರ್ ನಲ್ಲಿ ಏನು ನಡೆಯುತ್ತೆ ಎಂಬುದರ ಬಗ್ಗೆ  ಪ್ರಭಾ ಅವರಿಗೆ ಕುತೂಹಲ ಹೆಚ್ಚು ಎಂದು ಅನ್ನಿಸುತ್ತದೆ. ಬಾಗಲಕೋಟೆಗೆ ಹೋಗಿ ಅಲ್ಲಿ ಮೇಟಿ ಅವರ ಚೇಂಬರ್ ಗೆ ಹೋಗಿದ್ದರೇ ಲೈವ್ ವಿಡಿಯೋ ನೋಡಬಹುದಿತ್ತು, ಅವರ ಭಾಷೆಯಲ್ಲಿ ಹೇಳಬಹುದಾದರೇ ಮೇಟಿ ಅವರ ಕಚೇರಿಯಲ್ಲೇ ಪ್ರಭಾ ಅವರು ಅನುಭವ ಪಡೆಯಬಹುದಿತ್ತು ಎಂದು ಪ್ರತಾಪ್ ಸಿಂಹ ವಿಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಲೇಖಕಿ ಲೀಲಾ ಸಂಪಿಗೆ ಕಿಡಿಕಾರಿದ್ದಾರೆ. ಪ್ರಭಾ ಬೆಳವಂಗಲ ಫೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ನಕಲಿ ಎಂದು ತಿಳಿದ ಮೇಲೆ ಅದನ್ನು ತೆಗೆದು ಹಾಕಿದ್ದಾರೆ, ಸಂಸದರು ನೂರಲ್ಲ ಸಾವಿರ ದೂರು ದಾಖಲಿಸಲಿ, ಆದರೆ ಒಬ್ಬ ಸಂಸದರಾಗಿದ್ದುಕೊಂಡು ಮಹಿಳೆಯ ಬಗ್ಗೆ ಇಷ್ಟೊಂದು ನಿಕೃಷ್ಟವಾಗಿ ಮಾತನಾಡಬಾರದು ಎಂದು ಖಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.