ಮೇಕೆ ಕದಿಯಲು ಯತ್ನ ಆರೋಪ: ತುಮಕೂರಿನಲ್ಲಿ ದಲಿತ ವ್ಯಕ್ತಿಗೆ ಥಳಿಸಿ ಹತ್ಯೆ
ಮೇಕೆ ಕದಿಯಲು ಯತ್ನಿಸಿದನೆಂಬ ಆರೋಪದ ಮೇಲೆ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯೋರ್ವ ಮೃತ ಪಟ್ಟಿರುವ ಘಟನೆ ತುಮಕೂರಿನಲ್ಲಿ ...

ತುಮಕೂರು: ಮೇಕೆ ಕದಿಯಲು ಯತ್ನಿಸಿದನೆಂಬ ಆರೋಪದ ಮೇಲೆ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯೋರ್ವ ಮೃತ ಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನ ಜೋಗೇನಹಳ್ಳಿಯಲ್ಲಿ ಮಂಗಳವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ಕೃಷ್ಣಪ್ಪ ಎಂಬಾತ ಸಾವನ್ನಪ್ಪಿದ್ದಾನೆ. ಕೃಷ್ಣಪ್ಪ ಆಂಧ್ರ ಪ್ರದೇಶದ ಮಡಕಾ ಶಿರಾ ತಾಲೂಕಿನ ಮಣ್ಣೂರು ಗ್ರಾಮದವನು ಎಂದು ಗುರುತಿಸಲಾಗಿದೆ.
ಈ ಸಂಬಂಧ ರಾಮರೆಡ್ಡಿ ಆತನ ಮಗ ಬಾಬು ಮತ್ತು ನಾಗರಾಜ ಎಂಬುವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಕಷ್ಣಪ್ಪ ಮೂವರ ಜೊತೆ ಬೆಳಗಿನ 3 ಗಂಟೆ ವೇಳೆಗೆ ಮೇಕೆ ಕದಿಯಲು ರಾಮರೆಡ್ಡಿ ಮನೆಗೆ ಬಂದಿದ್ದ. ಈ ವೇಳೆ ಎಚ್ಚರಗೊಂಡ ರಾಮರೆಡ್ಡಿ ಮತ್ತಿತ್ತರು ಹೊರ ಬಂದು ನೋಡಿದಾಗ, ಕೃಷ್ಣಪ್ಪ ಮೇಕೆಯನ್ನು ಎಳೆದೊಯ್ಯುತ್ತಿದ್ದದ್ದು ಕಂಡು ಬಂತು.
ಅಪಾಯವನ್ನರಿತ ಕೃಷ್ಣಪ್ಪ ಜೊತೆ ಬಂದಿದ್ದ ಮತ್ತಿಬ್ಬರು ಪರಾರಿಯಾದರು. ಆದರೆ ಕೃಷ್ಣಪ್ಪ ಕತ್ತಲೆಯಲ್ಲಿ ಸಿಕ್ಕಿಬಿದ್ದ. ಮೂವರು ಕೃಷ್ಣಪ್ಪನನ್ನು ಮರಕ್ಕೆ ಕಟ್ಟಿ ಮರದ ತುಂಡುಗಳಿಂದ ಥಳಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಮಧುಗಿರಿ ಪೊಲೀಸ್ ಇನ್ಸ್ ಪೆಕ್ಟರ್ ನರಸಿಂಹ ಮೂರ್ತಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಕೃಷ್ಣಪ್ಪ ಸಂಬಂಧಿಕರು ಹಾಗೂ ಕೆಲವು ದಲಿತ ಮುಖಂಡರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಡಿಗೆನಹಳ್ಳಿ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


