ಕದ್ದಿದ್ದ ಐಫೋನ್‌ಗಾಗಿ ಸ್ನೇಹಿತನ ಹತ್ಯೆ: ಮೂವರ ಬಂಧನ
ಕೆಂಗೇರಿ ರೈಲ್ವೆ ಹಳಿ ಬಳಿ ಪತ್ತೆಯಾಗಿದ್ದ 19 ವರ್ಷದ ಯುವಕನ ಕೊಲೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿಸಿದ್ದು ಐಫೋನ್ ಗಾಗಿ ಸ್ನೇಹಿತರೇ...

Published On :
ಬೆಂಗಳೂರು: ಕೆಂಗೇರಿ ರೈಲ್ವೆ ಹಳಿ ಬಳಿ ಪತ್ತೆಯಾಗಿದ್ದ 19 ವರ್ಷದ ಯುವಕನ ಕೊಲೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿಸಿದ್ದು ಐಫೋನ್ ಗಾಗಿ ಸ್ನೇಹಿತರೇ ಯುವಕನನ್ನು ಹತ್ಯೆ ಮಾಡಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಮಾರ್ಚ್ 4ರಂದು 19 ವರ್ಷದ ಚಿನ್ನು ಅಲಿಯಾಸ್ ಶ್ರೀನಿವಾಸ್ ಎಂಬಾತನ ಮೃತದೇಹ ಕೆಂಗೇರಿಯ ರೈಲ್ವೆ ಹಳಿ ಬಳಿ ಪತ್ತೆಯಾಗಿತ್ತು. ಈ ಸಂಬಂಧ ಶ್ರೀನಿವಾಸ್ ಸ್ನೇಹಿತರಾದ ಅಭಿಷೇಕ್, ಮಧುಕುಮಾರ್ ಮತ್ತು ಮದನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಐಫೋನ್ ಗಾಗಿ ಸ್ನೇಹಿತನನ್ನು ಹತ್ಯೆ ಮಾಡಿರುವುದಾಗಿ ಮೂವರು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಈ ನಾಲ್ವರು ದೂಮಪಾನಕ್ಕೆ ದಾಸರಾಗಿದ್ದು ತಮ್ಮ ಚಟವನ್ನು ತೀರಿಸಿಕೊಳ್ಳಲು ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದರು. ಶ್ರೀನಿವಾಸ್ ಮೂರು ಮೊಬೈಲ್ ಗಳನ್ನು ಕದ್ದಿದ್ದು, ಇದರಲ್ಲಿ ಎರಡು ಫೋನ್ ಗಳು ಐಫೋನ್ ಆಗಿದ್ದವು. ಒಂದು ಐಫೋನ್ ಗೆ ಆರು ಸಾವಿರ ಕೊಡುವುದಾಗಿ ಪ್ರಮುಖ ಆರೋಪಿ ಅಭಿಶೇಕ್ ಕೇಳಿದ್ದಾನೆ ಇದಕ್ಕೆ ಶ್ರೀನಿವಾಸ್ ಒಪ್ಪದಿದ್ದರಿಂದ ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಅನೂಪ್ ಎ ಶೆಟ್ಟಿ ಹೇಳಿದ್ದಾರೆ.
ಐಫೋನ್ ಗಳಿಗೆ ಒಳ್ಳೆ ಬೆಲೆ ಕೊಡಿಸುವುದಾಗಿ ಮೂವರು ಆರೋಪಿಗಳು ಶ್ರೀನಿವಾಸ್ ನನ್ನು ಕೆಂಗೇರಿಗೆ ಕರೆದುಕೊಂಡು ಹೋಗಿದ್ದಾರೆ. ರೈಲ್ವೆ ಟ್ರಾಕ್ ಬಳಿ ಆತನಿಗೆ ಮಾರಿಜುನ್ನಾ ಸೇದುವಂತೆ ಹೇಳಿದ್ದು ಬಳಿಕ ಆತನ ಮೇಲೆ ಹಲ್ಲೆ ಮಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಟ್ರಾಕ್ ಮೇಲೆ ಬಿಸಾಡಿ ಹೋಗಿದ್ದರು. ಇದೇ ಟ್ರಾಕ್ ಮೇಲೆ ರೈಲು ಹೋಗಿದ್ದು ಶ್ರೀನಿವಾಸನ ದೇಹ ತುಂಡಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


