ಕದ್ದ ಬೈಕಿನ ಪೆಟ್ರೋಲ್ ಖಾಲಿಯಾಯ್ತು; ಪೊಲೀಸರಿಗೆ ಸಿಕ್ಕಿಬೀಳಲು ಅಷ್ಟೇ ಸಾಕಿತ್ತು!
ಬೈಕನ್ನು ಕದ್ದ ಇಬ್ಬರು ಕಳ್ಳರು ಅದರಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಹಿಂತಿರುಗಿಸಲು ನೋಡುತ್ತಿದ್ದ ಸಂದರ್ಭದಲ್ಲಿ...

Published On :
ಬೆಂಗಳೂರು: ಬೈಕನ್ನು ಕದ್ದ ಇಬ್ಬರು ಕಳ್ಳರು ಅದರಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಹಿಂತಿರುಗಿಸಲು ನೋಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಮೊನ್ನೆ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರು ಮೇದಹಳ್ಳಿ ಸೇತುವೆ ಬಳಿ ಹೀರೋ ಮೆಸ್ಟ್ರೊ ಎಡ್ಜ್ ಬೈಕನ್ನು ತಳ್ಳಿಕೊಂಡು ಹೋಗುತ್ತಿರುವುದನ್ನು ಇಬ್ಬರು ಪೊಲೀಸರು ನೋಡಿದ್ದಾರೆ. ಅವರ ಬಗ್ಗೆ ಸಂಶಯ ಬಂದು ಪೊಲೀಸರು ಅವರ ಬಳಿ ಬಂದು ನೀವು ಎಲ್ಲಿಯವರು, ಬೈಕ್ ಎಲ್ಲಿಂದ ಎಂದೆಲ್ಲ ಪ್ರಶ್ನಿಸಿದ್ದಾರೆ. ಅಲ್ಲದೆ ಬೈಕಿನಲ್ಲಿ ಕೀ ಇಲ್ಲದಿರುವುದನ್ನು ಪೊಲೀಸರು ಗಮನಿಸಿದರು. ಪೊಲೀಸರು ಬೈಕಿನ ದಾಖಲೆಗಳನ್ನು ಕೇಳಿದಾಗ ಅವರ ಬಳಿ ಇರಲಿಲ್ಲ.
ಕೂಡಲೇ ಕಳ್ಳರನ್ನು ಬಂಧಿಸಿದ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದರು. ಅವರಲ್ಲಿ ಪೆರುಮಾಳ್ ಎನ್ನುವವನು ಪೊಲೀಸ್ ಠಾಣೆಗೆ ತಲುಪುವುದರೊಳಗೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮತ್ತೊಬ್ಬ ಆಂಧ್ರ ಪ್ರದೇಶ ಮೂಲದ ವಿಜಿನಾಪುರದಲ್ಲಿ ವಾಸಿಸುತ್ತಿರುವ 20 ವರ್ಷದ ಶಿವ ಎಂಬುವವನು ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಪೆರುಮಾಳ್ ಬೈಕ್ ತಳ್ಳಿಕೊಂಡು ಹೋಗಲು ಮಾತ್ರ ಬಂದಿದ್ದು ತನಗೆ ಆತನ ಜೊತೆ ಯಾವುದೇ ವೈಯಕ್ತಿಕ ಸಂಪರ್ಕವಿಲ್ಲ ಎಂದು ಶಿವ ಪೊಲೀಸರಿಗೆ ಹೇಳಿದ್ದಾನೆ. ಆದರೂ ಇವರಿಬ್ಬರು ಸ್ನೇಹಿತರೆಂದು ಸಂಶಯವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ. ತನಿಖೆ ಮುಂದುವರಿದಿದೆ. ಬೈಕ್ ಸಂಖ್ಯೆ KA-03-JJ-7737 ರ ಮಾಲಿಕರು ಯಾರೂ ಇದುವರೆಗೆ ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


