ರಾಜ್ಯ

ಮೈಸೂರು: ಮಗಳ ಓದಿಗೆ ಫೀಸ್ ಕಟ್ಟಲಾಗದೆ ಮನನೊಂದ ತಂದೆ ಆತ್ಮಹತ್ಯೆ

ಮಗಳ ಕಾಲೇಜಿಗೆ ಫೀಸ್ ಕಟ್ಟಲಾಗದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮೈಸೂರಿನಲ್ಲಿ ...

ಮೈಸೂರು: ಮಗಳ ಓದಿಗೆ ಫೀಸ್ ಕಟ್ಟಲಾಗದೆ ಮನನೊಂದ ತಂದೆ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :
ಮೈಸೂರು: ಮಗಳ ಕಾಲೇಜಿಗೆ ಫೀಸ್ ಕಟ್ಟಲಾಗದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ.
51 ವರ್ಷದ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡವರು. ಇವರು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿಯಾಗಿದ್ದು, ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಪ್ರಸಾದ ತಯಾರಕರಾಗಿದ್ದರು. ಒಬ್ಬ ಮಗ ಹಾಗೂ ಮಗಳ ಜೊತೆ  ವಾಸವಿದ್ದರು.
ಮಗಳ ಓದಿಗಾಗಿ 12,500 ರೂ. ಕಾಲೇಜು ಫೀಸ್ ಕಟ್ಟಬೇಕಿತ್ತು. ಆದ್ರೆ ಹಣ ಹೊಂದಿಸಲು ಸಾಧ್ಯವಾಗದೆ ದೇವಸ್ಥಾನದ ಆವರಣದಲ್ಲಿನ ಮನೆಯಲ್ಲಿಯೇ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಇತ್ತೀಚೆಗಷ್ಟೇ ಗಂಗಾಧರ್ ಕೆಲಸಕ್ಕೆ ಸೇರಿದ್ದರು. ಹೀಗಾಗಿ ದೇವಾಸ್ಥಾನ ಆಡಳಿತ ಮಂಡಳಿಗೆ ಗಂಗಾಧರ್ ಸಮಸ್ಯೆಯ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ವಿನಾಯಕ ಮಂಡಳಿ ಸದಸ್ಯರು ಸ್ವಯಂ ಪ್ರೇರಿತರಾಗಿ ಹಣ ನೀಡಿ ಗಂಗಾಧರ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1.5 ಲಕ್ಷ ರು ಹಣ ನೀಡಲು ನಿರ್ಧರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.