ರಾಷ್ಟ್ರಪತಿ ಬೆಂಗಾವಲು ಪಡೆ ತಡೆದು ಆ್ಯಂಬುಲೆನ್ಸ್'ಗೆ ದಾರಿ ಮಾಡಿಕೊಟ್ಟ ಪಿಎಸ್ಐಗೆ ಮೆಚ್ಚುಗೆ, ಬಹುಮಾನ!
ನಮ್ಮ ಮೆಟ್ರೋ ಉದ್ಘಾಟನೆಗೆಂದು ನಗರಕ್ಕೆ ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಬೆಂಗಾವಲು ಪಡೆ ವಾಹನಗಳನ್ನು ತಡೆದು ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಪಿಎಸ್ಐ ಕಾರ್ಯಕ್ಕೆ...

Published On :
ಬೆಂಗಳೂರು: ನಮ್ಮ ಮೆಟ್ರೋ ಉದ್ಘಾಟನೆಗೆಂದು ನಗರಕ್ಕೆ ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಬೆಂಗಾವಲು ಪಡೆ ವಾಹನಗಳನ್ನು ತಡೆದು ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಪಿಎಸ್ಐ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆಯೇ ವ್ಯಕ್ತವಾಗತೊಡಗಿದೆ.
ವಿಐಪಿಗಳು ಬಂದಾಗ ರಸ್ತೆಯಲ್ಲಿ ಮೇಲೆ ಆ್ಯಂಬುಲೆನ್ಸ್ ಗಳು ಎಷ್ಟೇ ಹೊಡೆದುಕೊಂಡರೂ ಪೊಲೀಸರು ವಿಐಪಿಗಳಿಗೇ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ ದಾರಿ ಕೊಡುತ್ತಾರೆ. ವಾಹನದಲ್ಲಿ ರೋಗಿ ಸತ್ತರೂ ಯಾರೂ ದಾರಿ ಮಾಡಿಕೊಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳ ವಾಹನವನ್ನೇ ತಡೆದ ಸಬ್ ಇನ್ಸ್ ಪೆಕ್ಟರ್ ನಿಜಲಿಂಗಪ್ಪ ಅವರು ಅ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿರುವುದು ಇದೀಗ ಹಲವರ ಮೆಚ್ಚುಗೆಗೆ ಕಾರಣವಾಗಿದೆ.
ಟ್ರಿನಿಟಿ ಜಂಕ್ಷನ್ ಬಳಿ ರಾಷ್ಟ್ರಪತಿಗಳ ವಾಹನ ಸಾಗುತ್ತಿತ್ತು. ಇದೇ ವೇಳೆ ರಸ್ತೆಯಲ್ಲಿ ಆ್ಯಂಬುಲೆನ್ಸ್ ವೊಂದು ಬಂದಿದೆ. ಆ್ಯಂಬುಲೆನ್ಸ್ ಹೆಚ್ಎಎಲ್ ಬಳಿಯಿರುವ ಖಾಸಗಿ ಆಸ್ಪತ್ರೆಗೆ ಹೋಗಬೇಕಿತ್ತು. ಈ ವೇಳೆ ಸ್ಛಳದಲ್ಲಿ ಕರ್ತವ್ಯ ನಿರತರಾಗಿದ್ದ ಹಲಸೂರು ಟ್ರಾಫಿಕ್ ಪೊಲೀಸ್ ಎಸ್.ಹೆಚ್. ನಿಜಲಿಂಗಪ್ಪ ಅವರು ಆ್ಯಂಬುಲೆನ್ಸ್ ಗೆ ಹೆಚ್ಚು ಪ್ರಾಶಸ್ತ್ಯ ನೀಡಿ ದಾರಿ ಮಾಡಿಕೊಟ್ಟಿದ್ದರು.
ನಿಜಲಿಂಗಪ್ಪ ಅವರ ಈ ಕೆಲಸವನ್ನು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಅಭಯ್ ಗೋಯಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ಸಾಕಷ್ಟು ಅಭಿನಂದನೆಗಳು ವ್ಯಕ್ತವಾಗಿದ್ದವು.
ತದನಂತರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರ ಕೂಡ ನಿಜಲಿಂಗಪ್ಪ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಟ್ರಾಫಿಕ್ ಪೊಲೀಸ್ ಕೆಲಸ ತಿಳಿದಷ್ಟು ಸುಲಭವಾಗಿರುವುದಿಲ್ಲ. ರಸ್ತೆಯಲ್ಲಿ ನಾವು ತಿಳಿದಿದ್ದಕ್ಕಿಂತಲೂ ಪರಿಸ್ಥಿತಿ ಕಠಿಣವಾಗಿರುತ್ತದೆ ಆದರೂ ನಮ್ಮನ್ನು ಅರ್ಥ ಮಾಡಿಕೊಂಡಕ್ಕೆ ಧನ್ಯವಾದಗಳು. ರಾಷ್ಟ್ರಪತಿಗಳ ಸಮ್ಮುಖದಲ್ಲಿಯೇ ಆ್ಯಂಬುಲೆನ್ಸ್ ತೆರಳಲು ದಾರಿ ಮಾಡಿಕೊಟ್ಟ ಪಿಎಸ್ಐ ನಿಜಲಿಂಗಪ್ಪ ಅವರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruambulanceTraffic Policerewardಬಹುಮಾನಆ್ಯಂಬುಲೆನ್ಸ್ಸಂಚಾರಿ ಪೊಲೀಸ್President conveyPSI Nijalingappaರಾಷ್ಟ್ರಪತಿ ಬೆಂಗಾವಲು ಪಡೆಪಿಎಸ್ಐ ನಿಜಲಿಂಗಪ್ಪ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


