ಕಳೆದ ವರ್ಷ ಆಸ್ತಿಗಳನ್ನು ಪರಿಶೀಲನೆ ಮಾಡದ ಬಿಬಿಎಂಪಿ
ತಮ್ಮ ಆಸ್ತಿಗಳ ನಿಜವಾದ ಅಳತೆಯನ್ನು ಸಲ್ಲಿಸುವಂತೆ ಅಥವಾ ನಿಗದಿಗಿಂತ ಮೌಲ್ಯ ಮಾಡಿರುವುದು....

Published On :
ಬೆಂಗಳೂರು: ತಮ್ಮ ಆಸ್ತಿಗಳ ನಿಜವಾದ ಅಳತೆಯನ್ನು ಸಲ್ಲಿಸುವಂತೆ ಅಥವಾ ನಿಗದಿಗಿಂತ ಮೌಲ್ಯ ಮಾಡಿರುವುದು ಕಡಿಮೆಯಾಗಿದ್ದರೆ ಕಡೆಯ ಬಾರಿಗೆ ಆಸ್ತಿಯ ನಿಜವಾದ ಮೌಲ್ಯದ ವರದಿ ನೀಡಲು ಕೊನೆಯ ಅವಕಾಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಐಟಿ, ಬಿಟಿ ಕಂಪೆನಿಗಳಿಗೆ, ವಾಣಿಜ್ಯ ಸಂಕೀರ್ಣಗಳು, ಟೆಕ್ ಪಾರ್ಕ್ ಮತ್ತು ನಗರದ ಆಸ್ತಿ ಮಾಲೀಕರಿಗೆ ಕಳೆದ ಡಿಸೆಂಬರ್ ನಲ್ಲಿ ಸೂಚಿಸಿತ್ತು.
ಕರ್ನಾಟಕ ನಗರ ಪಾಲಿಕೆ ಕಾಯ್ದೆ 1976ರ ಸೆಕ್ಷನ್ 110ರಡಿಯಲ್ಲಿ ಬಿಬಿಎಂಪಿ ಆಸ್ತಿಗಳ ಸ್ವೇಚ್ಛೆಯ ತಪಾಸಣೆ ಮಾಡಬಹುದು. ಅದು ನಿವಾಸದ್ದಾಗಿರಲಿ ಅಥವಾ ವಾಣಿಜ್ಯದ್ದಾಗಿರಲಿ 2000ನೇ ಇಸವಿಯಲ್ಲಿ ಜಾರಿಗೆ ಬಂದ ಸ್ವ-ಮೌಲ್ಯಮಾಪನ ಯೋಜನೆಯಡಿ ಅವುಗಳನ್ನು ಮತ್ತೆ ಅಳತೆ ಮಾಡಬಹುದು.
ಹೀಗೆ ಮಹಾನಗರ ಪಾಲಿಕೆ 2015ರಲ್ಲಿ ತಪಾಸಣೆ ಮಾಡಿತ್ತು. ಆದರೆ ನಗರದ ಶೇಕಡಾ 1 ಭಾಗವನ್ನು ಕೂಡ ಅದು ತಪಾಸಣೆ ಮಾಡಿರಲಿಲ್ಲ.
ಬಿಬಿಎಂಪಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಕೆ.ಗುಣಶೇಖರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಈ ವರ್ಷ ಇನ್ನೂ ಪರಿಶೀಲನೆ ಆರಂಭಿಸಿಲ್ಲ.ಮುಂದಿನ ತಿಂಗಳು ಆರಂಭಿಸುವ ಉದ್ದೇಶವಿದೆ. ಕಡಿಮೆ ಬೆಲೆಕಟ್ಟಿದ ಆಸ್ತಿಗಳ ಮಾಲೀಕರಿಗೆ ಸರಿಯಾದ ಮೌಲ್ಯ ಘೋಷಿಸುವಂತೆ ಕಳೆದ ಡಿಸೆಂಬರ್ ನಲ್ಲಿ ಆಸ್ತಿ ಮಾಲೀಕರಿಗೆ ಸೂಚಿಸಿದ್ದೆವು. ಜನವರಿ 14ರವರೆಗೆ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿಯ ನಿಜವಾದ ಮೌಲ್ಯವನ್ನು ಘೋಷಿಸಲು ಅವಕಾಶವಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


