ಮೈಸೂರು: 85 ದಿನಗಳ ಬಳಿಕ ಸೌದಿಯಿಂದ ತವರಿಗೆ ಬಂದ ಶವ
ಸೌದಿ ಅರೇಬಿಯಾದಲ್ಲಿ ಅನುಮಾಮಸ್ಪಾದವಾದ ರೀತಿಯಲ್ಲಿ ಮೃತಪಟ್ಟಿದ್ದ ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಶಬ್ಬೀರ್ ಶವವನ್ನು 85 ದಿನಗಳ ನಂತರ ಬಳಿಕ ..

Published On :
ಮೈಸೂರು: ಸೌದಿ ಅರೇಬಿಯಾದಲ್ಲಿ ಅನುಮಾಮಸ್ಪಾದವಾದ ರೀತಿಯಲ್ಲಿ ಮೃತಪಟ್ಟಿದ್ದ ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಶಬ್ಬೀರ್ ಶವವನ್ನು 85 ದಿನಗಳ ನಂತರ ಬಳಿಕ ಗುರುವಾರ ತವರಿಗೆ ತರಲಾಯಿತು.
ಸೌದಿ ಅರೇಬಿಯಾದಿಂದ ಬುಧವಾರ ಸಂಜೆ ಹೊರಟ ವಿಮಾನ ಗುರುವಾರ ಬೆಳಗ್ಗೆ ಹೊರಟ ವಿಮಾನ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು. ಮಧ್ಯಾಹ್ನ 12.45 ಕ್ಕೆ ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು.
ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಂಸದ ಪ್ರತಾಪ್ ಸಿಂಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಯತ್ನದ ನಂತರ ಶವವನ್ನು ಮೈಸೂರಿಗೆ ತರಲಾಯಿತು.
2016ರಲ್ಲಿ ಖಲೀಲ್ ಎಂಬಾತನ ಸಹಾಯದೊಂದಿಗೆ ಶಬೀರ್ ದುಬೈಗೆ ತೆರಳಿದ್ದ. ಆರಸಿಕೆರೆಯ ಖಲೀಲ್ ಏಜೆಂಟ್ ಆಗಿದ್ದು, ಹಣ ಕೊಡುವಂತೆ ಪೀಡಿಸುತ್ತಿದ್ದ ಎಂದು ಶಬ್ಬೀರ್ ಪೋಷಕರು ಆರೋಪಿಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಕಾಲುಗಳು ನೇತಾಡುತ್ತಿದ್ದವು, ಕೊಲೆ ಮಾಡಿ ಆತ್ಮಹತ್ಯೆಯಂತೆ ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ತನಿಖೆಯ ಉದ್ದೇಶಕ್ಕಾಗಿ ಶವವನ್ನು ವಿಳಂಬವಾಯಿತು. ತನಿಖೆಯಲ್ಲಿ ಇದು ಆತ್ಮಹತ್ಯೆ ಎಂಬುದು ಖಚಿತವಾಗಿದೆ ಎಂದು ಸೌದಿ ಪೊಲೀಸರು ವರದಿ ನೀಡಿದ್ದಾರೆ, ಆದರೂ ಅನುಮಾನ ಕಾಡುತ್ತಿದೆ ಎಂದು ಶಬ್ಬೀರ್ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಶಬ್ಬೀರ್ ಕೆಲಸ ಮಾಡುತ್ತಿದ್ದ ಮಾಲೀಕ ಶವವನ್ನು ಭಾರತಕ್ಕೆ ತರಲು ಹಾಗೂ ಅದರ ವೆಚ್ಚವನ್ನು ಅವರೇ ಭರಿಸಿದ್ದರು. ಶಬ್ಬೀರ್ ಪೋಷಕರು ತನಿಖೆಗಾಗಿ ಮತ್ತೆ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


