ಎಚ್ ಎಸ್ ಆರ್ ಲೇಔಟ್ ನಿವಾಸಿಯಿಂದ ವಿಡಿಯೋ ಅಪ್ ಲೋಡ್: 2 ದಿನದಲ್ಲಿ 14 ಸಾವಿರ ವೀಕ್ಷಣೆ
ಎಚ್ ಎಸ್ ಆರ್ ಲೇಔಟ್ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋವನ್ನು 2 ದಿನದಲ್ಲಿ 14 ಸಾವಿರ..

Published On :
ಬೆಂಗಳೂರು: ಎಚ್ ಎಸ್ ಆರ್ ಲೇಔಟ್ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋವನ್ನು 2 ದಿನದಲ್ಲಿ 14 ಸಾವಿರ ಮಂದಿ ವೀಕ್ಷಿಸಿದ್ದಾರೆ.
ಎಚ್ ಎಸ್ ಆರ್ ಲೇಔಟ್ ನ ನಿವಾಸಿ ರೆಂಜಿತ್ ಮೋಹನ್ ದಾಸ್ ಜನರಲ್ಲಿ ಅಪರಾಧಿಗಳ ಬಗ್ಗೆ ಜಾಗೃತಿ ಮೂಡಿಸಲು ವಿಡಿಯೋ ಅಪ್ ಲೋಡ್ ಮಾಡಿದ್ದರು. ಮೇ 27 ರಂದು ರಾಷ್ಟ್ರಕೂಟ ರೆಸ್ಟೊರೆಂಟ್ ಮುಂಭಾಗ ನಡೆದ ಘಟನೆ ಸಂಬಂಧ ವಿಡಿಯೋ ಅಪ್ ಲೋಡ್ ಮಾಡಿದ್ದರು.
ಅಂದು ಮುಖ್ಯ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿ ಮೋಹನ್ ದಾಸ್ ಜಿಮ್ ಗೆ ತೆರಳಿದ್ದರು. ನಂತರ ಬಂದ ಕೆಲ ಕಿಡಿಗೇಡಿಗಳು ಅವರ ಕಾರಿನ ಕಿಟಕಿ ಗಾಜು ಒಡೆದು, ಹಣದ ಬ್ಯಾಗ್ ಎಂದು ಸಿಡಿಯಿದ್ದ ಪೌಚ್ ಅನ್ನು ಕದ್ದೊಯ್ದಿದ್ದರು. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ವಿಡಿಯೋವನನ್ನು ಮೋಹನ್ ದಾಸ್ ಪೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ಎಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಫೇಸ್ ಬುಕ್videoವಿಡಿಯೋViralHSR Layoutವೈರಲ್Face bookಎಚ್ ಎಸ್ ಆರ್ ಲೇಔಟ್Renjith Mohandasರೆಂಜಿತ್ ಮೋಹನ್ ದಾಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


