ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ: ಹೈಕೋರ್ಟ್ ಮುಂದೆ ಆಟೋ ಚಾಲಕರ ಅಳಲು
ನಿವೇಶನ, ಮನೆ, ಪಡಿತರ ಕಾರ್ಡ್, ಹೆಲ್ತ್ ಇನ್ಷ್ಯೂರೆನ್ಸ್ ಒದಗಿಸದ ರಾಜ್ಯ ಸರ್ಕಾರದ ವಿರುದ್ಧ ಆಟೋ ರಿಕ್ಷಾ ಚಾಲಕರ ಕೋ ಆಪರೇಟಿವ್ ಸೊಸೈಟಿ...

Published On :
ಬೆಂಗಳೂರು: ನಿವೇಶನ, ಮನೆ, ಪಡಿತರ ಕಾರ್ಡ್, ಹೆಲ್ತ್ ಇನ್ಷ್ಯೂರೆನ್ಸ್ ಒದಗಿಸದ ರಾಜ್ಯ ಸರ್ಕಾರದ ವಿರುದ್ಧ ಆಟೋ ರಿಕ್ಷಾ ಚಾಲಕರ ಕೋ ಆಪರೇಟಿವ್ ಸೊಸೈಟಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ ಮತ್ತು ಪಿ.ಎಸ್ ದಿನೇಶ್ ಕುಮಾರ್ ಅರ್ಜಿ ವಿಚಾರಣೆ ನಡೆಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಪುತ್ತಿಗೆ ರಮೇಶ್, ಕನ್ನಡದಲ್ಲಿ ಒಂದು ಗಾದೆಯಿದೆ, ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ, ಆಟೋ ಚಾಲಕರಿಗೆ ಎಲ್ಲಾ ರೀತಿಯ ಸವಲತ್ತು ನೀಡುವುದಾಗಿ ಘೋಷಿಸಿದೆ. ಆಟೋ ಚಾಲಕರು ಸಾಲದ ಸುಳಿಗೆ ಸಿಲುಕಿ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಘೋಷಿಸಿದೆ. ಆದರೆ ಅದನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ವಿಚಾರಣೆ ಆಲಿಸಿದ ವಿಭಾಗಿಯ ಪೀಠ ಈ ಸಂಬಂಧ, ರಾಜ್ಯ ಸರ್ಕಾರ, ಇಎಸ್ ಐಸಿ, ಮತ್ತು ಸಾರಿಗೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ನೊಟೀಸ್ ಜಾರಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
State GovernmentHigh Courtರಾಜ್ಯ ಸರ್ಕಾರಹೈಕೋರ್ಟ್PILಪಿಐಎಲ್Autorickshaw Drivers Cooperative Societyಆಟೋ ಚಾಲಕರ ಕೊ ಆಪರೇಟಿವ್ ಸೊಸೈಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


