ರಾಜ್ಯ

ಮೈಸೂರು ದಸರಾ 2017: ಸರಳ, ದುರ್ಗಾ ಪರಮೇಶ್ವರಿಗೆ ವಿಶ್ರಾಂತಿ, ಅರ್ಜುನನಿಗೆ ಅಂಬಾರಿ ಹೊಣೆ!

ಪ್ರಸಕ್ತ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಾರಿಯೂ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.

ಮೈಸೂರು ದಸರಾ 2017: ಸರಳ, ದುರ್ಗಾ ಪರಮೇಶ್ವರಿಗೆ ವಿಶ್ರಾಂತಿ, ಅರ್ಜುನನಿಗೆ ಅಂಬಾರಿ ಹೊಣೆ!
ಸಂಗ್ರಹ ಚಿತ್ರ
Published On :

ಮೈಸೂರು: ಪ್ರಸಕ್ತ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಾರಿಯೂ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.

ಮೈಸೂರು ಅರಣ್ಯಾಧಿಕಾರಿಗಳ ತಂಡ ದಸರೆಗಾಗಿ ಒಟ್ಟು 15 ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಕಳೆದ ವರ್ಷದ ಉಚ್ಸವದಲ್ಲಿ ಪಾಲ್ಗೊಂಡಿದ್ದ ಸರಳ, ದುರ್ಗಾ ಪರಮೇಶ್ವರಿ ಆನೆಗಳಿಗೆ ಈ ಬಾರಿ ವಿಶ್ರಾಂತಿ ನೀಡಲು  ನಿರ್ಧರಿಸಲಾಗಿದೆ. ಸರಳ, ದುರ್ಗಾ ಪರಮೇಶ್ವರಿ ಆನೆಗಳು ಗರ್ಭಧರಿಸಿದ್ದು ಇದೇ ಕಾರಣಕ್ಕೆ ಈ ಬಾರಿ ದಸರೆಯಿಂದ ವಿಶ್ರಾಂತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ ಕಳೆದ ಸಾಲಿನಂತೆಯೇ ಈ  ಬಾರಿಯೂ ಅರ್ಜುನ ಆನೆ ಅಂಬಾರಿ ಹೊರಲಿದ್ದು, ಉಳಿದಂತೆ ಬಲರಾಮ, ಅಭಿಮನ್ಯು ಮತ್ತು ಗೋಪಾಲವಾಮಿ, ದುಬಾರೆ ಆನೆ ಶಿಬಿರದಲ್ಲಿರುವ ಕಾವೇರಿ, ವಿಜಯ, ವಿಕ್ರಮ್, ಗೋಪಿ, ಹರ್ಷ ಮತ್ತು ಪ್ರಶಾಂತ, ಗಜೇಂದ್ರ ದಸರೆಯಲ್ಲಿ  ಪಾಲ್ಗೊಳ್ಳಲಿವೆ.

ಅಂತೆಯೇ ಈ ವರ್ಷ 4 ಹೊಸ ಆನೆಗಳನ್ನು ಉತ್ಸವಕ್ಕೆ ಆಯ್ಕೆ ಮಾಡಲಾಗಿದ್ದು, ಈ ಬಾರಿ ಕೃಷ್ಣ, ದ್ರೋಣ ಮತ್ತು ಭೀಮಾ ಮತ್ತು ವರಲಕ್ಷ್ಮಿ ಎಂಬ ಆನೆಗಳನ್ನು ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಡಿಸಿಎಫ್ (ವನ್ಯಜೀವಿ ) ವಿ. ಏಡುಕೊಂಡಲು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.