ರಾಜ್ಯ

ಟಿ.ನರಸೀಪುರ ತಹಶೀಲ್ದಾರ್ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಪತ್ನಿ ಒತ್ತಾಯ

ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಟಿ. ನರಸೀಪುರ ತಹಶೀಲ್ದಾರ್ ಶಂಕರಯ್ಯ ಅವರ ಅಂತ್ಯ ಸಂಸ್ಕಾರ ಮಂಡ್ಯದಲ್ಲಿ ಗುರುವಾರ..

ಟಿ.ನರಸೀಪುರ ತಹಶೀಲ್ದಾರ್ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಪತ್ನಿ ಒತ್ತಾಯ
ಆತ್ಮಹತ್ಯೆ ಮಾಡಿಕೊಂಡ ತಹಶೀಲ್ದಾರ್ ಶಂಕರಯ್ಯ
Published On :
ಮಂಡ್ಯ: ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಟಿ. ನರಸೀಪುರ ತಹಶೀಲ್ದಾರ್ ಶಂಕರಯ್ಯ ಅವರ ಅಂತ್ಯ ಸಂಸ್ಕಾರ ಮಂಡ್ಯದಲ್ಲಿ ಗುರುವಾರ ನಡೆಯಿತು.
ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸಬೇಕೆಂದು ಮೃತ ತಹಶೀಲ್ದಾರ್ ಪತ್ನಿ ಪುಷ್ಪಾವತಿ ಒತ್ತಾಸಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವಂತ ಬಲಹೀನ ಮನಸ್ಥಿತಿ ನನ್ನ ಪತಿಯದ್ದಾಗಿರಲಿಲ್ಲ. ಒಂದು ವೇಳೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದರೇ, ಅವರು ಮಗಳ ಮದುವೆಗೆ ಸಿದ್ಧತೆ ನಡೆಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ದುರಂತ ನಡೆದ ದಿನ ನಾನು ಪತಿಗೆ ಕರೆ ಮಾಡಿದ್ದೆ, ಆದರೆ ಅವರು ನನ್ನ ಕರೆಯನ್ನು ಸ್ವೀಕರಿಸಲಿಲ್ಲ, ಆದರೆ ಅವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ ನಂತರ ನನಗೆ ಆಘಾತವಾಯಿತು. 
ಶಂಕರಯ್ಯ ಅವರಿಗೆ ಟಿ ನರಸೀಪುರದಲ್ಲಿ ಕೆಲಸ ಮಾಡುವುದು ಇಷ್ಟವಿರಲಿಲ್ಲ, ಹೀಗಾಗಿ ಅವರು ವರ್ಗಾವಣೆ ಬಯಸಿದ್ದರು. ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು, ಆಗಲೇ ಸಾವಿನ ಹಿಂದಿನ ಕಾರಣ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.