ಆನಿಮೇಶನ್ ಮತ್ತು ಗ್ರಾಫಿಕ್ಸ್ ಕೇಂದ್ರವಾಗಲಿರುವ ಬೆಂಗಳೂರು ನಗರ
ಬೆಂಗಳೂರು ನಗರವನ್ನು ಆನಿಮೇಶನ್, ಗ್ರಾಫಿಕ್ಸ್ ಮತ್ತು ವಿಷುವಲ್ ಎಫೆಕ್ಟ್ ಟೆಕ್ನಾಲಜಿಯ ಅಂತಾರಾಷ್ಟ್ರೀಯ...

Published On :
ಬೆಂಗಳೂರು: ಬೆಂಗಳೂರು ನಗರವನ್ನು ಆನಿಮೇಶನ್, ಗ್ರಾಫಿಕ್ಸ್ ಮತ್ತು ವಿಷುವಲ್ ಎಫೆಕ್ಟ್ ಟೆಕ್ನಾಲಜಿಯ ಅಂತಾರಾಷ್ಟ್ರೀಯ ಕೇಂದ್ರವನ್ನಾಗಿ ಮಾಡಲು ರಾಜ್ಯ ಸಚಿವ ಸಂಪುಟ ನಿನ್ನೆ ಕರ್ನಾಟಕ ಅನಿಮೇಶನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಅಂಡ್ ಕಾಮಿಕ್ಸ್ (ಎವಿಜಿಸಿ) ನೀತಿ 2017-22 ಕ್ಕೆ ಅನುಮೋದನೆ ನೀಡಿದೆ. ಆನಿಮೇಶನ್ ಗೆ ಪರಿಣತ ಕೇಂದ್ರ(ಸೆಂಟರ್ ಆಫ್ ಎಕ್ಸೆಲೆನ್ಸ್) ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ.
2022ರವರೆಗೆ ಯೋಜನೆಯಿಟ್ಟುಕೊಂಡು ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಆನಿಮೇಶನ್, ಗ್ರಾಫಿಕ್ಸ್, ವಿಷುವಲ್ ಎಫೆಕ್ಟ್ ಗಳಲ್ಲಿ ಕೌಶಲ್ಯಾಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲು ಒತ್ತು ನೀಡಲಿದೆ. ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಉದ್ಯೋಗಾವಕಾಶ ಹೆಚ್ಚಿಸಲು ಈ ನೀತಿ ಅನುವು ಮಾಡಿಕೊಡಲಿದೆ.
''ಹೊಸ ನೀತಿ ಸುಮಾರು 20,000 ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ'' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ನಗರದಲ್ಲಿ ಕೌಶಲ್ಯಾಭಿವೃದ್ಧಿಯ ಪರಿಣತ ಕೇಂದ್ರವನ್ನು ವಿಶ್ವದಲ್ಲಿಯೇ ಅತ್ಯಂತ ಉತ್ತಮ ಆನಿಮೇಶನ್ ಸ್ಕೂಲ್ ಗಳಲ್ಲಿ ಒಂದಾದ ಪ್ಯಾರಿಸ್ ಮೂಲದ ಗೊಬೆಲಿನ್ಸ್ ಜೊತೆ ಸೇರಿ ಮೊದಲ ಬಾರಿಗೆ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 20 ಕೋಟಿ ರೂಪಾಯಿ ವೆಚ್ಚದಲ್ಲಿ ಆನಿಮೇಶನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್ ನಿಧಿ ಸ್ಥಾಪಿಸಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bengaluru Cityಬೆಂಗಳೂರು ನಗರgraphicsAnimationKarnataka AnimationVisual EffectsGaming and Comics (AVGC) Policy 2017-22ಆನಿಮೇಶನ್ಗ್ರಾಫಿಕ್ಸ್ಕರ್ನಾಟಕ ಅನಿಮೇಶನ್ವಿಷುಯಲ್ ಎ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


