ಗದಗ: ವಿಶೇಷಾಸಕ್ತರಿಂದ ಶಂಕಿತ ಏಲಿಯನ್ ಕುರಿತು ಮಾಹಿತಿ ಸಂಗ್ರಹ!
ಕರ್ನಾಟಕದಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿರುವ ಏಲಿಯನ್ ಗಳ ಹೆಜ್ಜೆಗುರುತು ಹಿನ್ನಲೆ ಪತ್ತೆ ಮಾಡಲು ದೆಹಲಿಯಿಂದ ವಿಶೇಷ ಪಡೆಯೊಂದು ಆಗಮಿಸಿದ್ದು, ಗದಗದ ಅಂಟೂರು ಗ್ರಾಮದಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ.

ಗದಗ: ಕರ್ನಾಟಕದಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿರುವ ಏಲಿಯನ್ ಗಳ ಹೆಜ್ಜೆಗುರುತು ಹಿನ್ನಲೆ ಪತ್ತೆ ಮಾಡಲು ದೆಹಲಿಯಿಂದ ವಿಶೇಷ ಪಡೆಯೊಂದು ಆಗಮಿಸಿದ್ದು, ಗದಗದ ಅಂಟೂರು ಗ್ರಾಮದಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ.
ಕಳೆದ ಭಾನುವಾರ ರಾತ್ರಿ ಕರ್ನಾಟಕದ ಗದಗ ಜಿಲ್ಲೆಯ ಸಮೀಪದ ಅಂಟೂರು ಗ್ರಾಮದಲ್ಲಿ ಏಲಿಯನ್ ಗಳು ಆಗಮಿಸಿದ್ದವು ಎಂಬ ಸುದ್ದಿ ಹಾರಿದಾಡುತ್ತಿತ್ತು. ಇದಕ್ಕೆ ಇಂಬು ನೀಡುವಂತೆ ಗ್ರಾಮದ ಸಮೀಪದ ಗದ್ದೆಗಳಲ್ಲಿ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಈ ಹೆಜ್ಜೆಗುರುತುಗಳು ಏಲಿಯನ್ ಗಳದ್ದೇ ಎಂಬ ಮಾತು ಕೂಡ ಕೇಳಿಬರುತ್ತಿತ್ತು. ಆದರೆ ಬಳಿಕ ಶೋಧ ನಡೆಸಿದ ಅರಣ್ಯಾಧಿಕಾರಿಗಳು ಘಟನಾ ಪ್ರದೇಶದಲ್ಲಿ ಯಾವುದೇ ಏಲಿಯನ್ ಗಳು ಪತ್ತೆಯಾಗಿಲ್ಲ ಎಂದು ವರದಿ ನೀಡಿದ್ದರಾದರೂ, ಸಮೀಪದ ಹೊಲಗದ್ದೆಗಳಲ್ಲಿದ್ದ ಹೆಜ್ಜೆಗುರುತುಗಳ ಕುರಿತು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.
ಹೀಗಾಗಿ ಆ ಹೆಜ್ಜೆ ಗುರುತುಗಳ ಜಾಡನ್ನು ಹಿಡಿದು ಶಂಕಿತ ಏಲಿಯನ್ ಗಳ ಮೂಲವನ್ನು ಪತ್ತೆ ಮಾಡಲು ದೆಹಲಿಯಿಂದ ವಿಶೇಷ ತಂಡವೊಂದು ಆಗಮಿಸಿದ್ದು, ಹೆಜ್ಜೆ ಗುರುತುಗಳ ಶೋಧ ಕಾರ್ಯದಲ್ಲಿ ತೊಡಗಿದೆ. ಡಿಸ್ ಕ್ಲೋಷರ್ ಟೀಂ ಇಂಡಿಯಾ ಎಂಬ ತಂಡ ದೆಹಲಿಯಿಂದ ಗದಗ ಜಿಲ್ಲೆಯ ಅಂಟೂರು ಗ್ರಾಮಕ್ಕೆ ಆಗಮಿಸಿದ್ದು, ಅಂಟೂರು ಗ್ರಾಮದಲ್ಲೇ ಮೊಕ್ಕಾಂ ಹೂಡಿ ಶೋಧ ನಡೆಸುತ್ತಿದೆ. ಬೃಹದೇಶ್ವರ ಮಠದ ಸಮೀಪದ ಹೊಲದಲ್ಲಿರುವ ಶಂಕಿತ ಹೆಜ್ಜೆ ಗುರುತುಗಳನ್ನು ಶೋಧನೆಗಳ ಒಳಪಡಿಸಿದ್ದು, ಹೆಜ್ಜೆ ಗುರುತಿನ ಅಳತೆ ಮತ್ತು ಹೆಜ್ಜೆಯಿಂದ ಹೆಜ್ಜೆಗಿರುವ ಅಂತರವನ್ನು ಮಾಪನ ಮಾಡಿದ್ದಾರೆ.
ಅಂತೆಯೇ ಹೆಜ್ಜೆ ಗುರುತಿನ ಮಣ್ಣಿನ ಮಾದರಿಯನ್ನೂ ಕೂಡ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಹೆಜ್ಜೆಗುರುತು ಪತ್ತೆಯಾದ ಸಮೀಪದ ಮರಗಳ ಮೇಲಿನ ಗುರುತುಗಳನ್ನು ಕೂಡ ಪರೀಕ್ಷೆಗೊಳಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


