ರಾಜ್ಯ

ಬೆಳಗಾವಿಯಲ್ಲಿ ಭಾರಿ ಮಳೆ, ಓರ್ವ ಸಾವು, ಹಲವು ಕಡೆ ರಸ್ತೆ ಬಂದ್

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಬುಧವಾರ ಉತ್ತಮ ಮಳೆಯಾಗುತ್ತಿದ್ದು, ಭಾರಿ ಮಳೆಯಿಂದಾಗಿ ಬೆಳಗಾವಿಯಲ್ಲಿ....

ಬೆಳಗಾವಿಯಲ್ಲಿ ಭಾರಿ ಮಳೆ, ಓರ್ವ ಸಾವು, ಹಲವು ಕಡೆ ರಸ್ತೆ ಬಂದ್
ಸಾಂದರ್ಭಿಕ ಚಿತ್ರ
Published On :
ಬೆಳಗಾವಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಬುಧವಾರ ಉತ್ತಮ ಮಳೆಯಾಗುತ್ತಿದ್ದು, ಭಾರಿ ಮಳೆಯಿಂದಾಗಿ ಬೆಳಗಾವಿಯಲ್ಲಿ ಮನೆ ಕುಸಿದು ಓರ್ವ ಯುವಕ ಮೃತಪಟ್ಟಿದ್ದಾರೆ. ಅಲ್ಲದೆ ರಸ್ತೆಗಳು ಕೊಚ್ಚಿ ಹೋಗಿರುವುದರಿಂದ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು, ಮಳೆ ಅವಾಂತರಕ್ಕೆ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಮನೆ ಕುಸಿದು ಮಲ್ಲಿಕಾರ್ಜುನ ಉರ್ಫ್‌ ಸಂತೋಷ ಮಸ್ಕಿ ಎಂಬುವವರು ಮೃತಪಟ್ಟಿದ್ದಾರೆ. ಮಣ್ಣಿನ ಅವಶೇಷದಡಿ ಸಿಲುಕಿದ್ದ ಮಸ್ಕಿ ದೇಹವನ್ನು ಗ್ರಾಮಸ್ಥರು ಹರಸಾಹಸಪಟ್ಟು ಹೊರತೆಗೆದಿದ್ದಾರೆ. 
12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ನಾಲಾ ಕಂ ಬ್ರಿಡ್ಜ್‌ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇನ್ನು ಮಹಾರಾಷ್ಟ್ರದಲ್ಲೂ  ಮಳೆ ಅಬ್ಬರ ಜೋರಾಗಿದ್ದರಿಂದ ಕೃಷ್ಣಾ ನದಿಯ ಒಳಹರಿವು 50 ಸಾವಿರ ಕ್ಯುಸೆಕ್ಸ್‌ನಷ್ಟು ಹೆಚ್ಚಳವಾಗಿದೆ. ಈಗಾಗಲೇ ನದಿಗೆ ನಿರ್ಮಿಸಿದ್ದ ಚಿಕ್ಕ ಬ್ಯಾರೆಜ್‌ ಯಡೂರ-ಕಲ್ಲೊಳ ನೀರಿನಿಂದ ಮುಳುಗಡೆಯಾಗಿದೆ. ವರುಣನ ಆರ್ಭಟ ರೈತರಲ್ಲಿ ಮಂದಹಾಸ ಮೂಡಿಸಿದೆ ಹಾಗೂ ನದಿ ಪಾತ್ರದ ಜನರಲ್ಲಿ ಆತಂಕವನ್ನೂ ಸೃಷ್ಟಿಸಿದೆ.
ಇನ್ನೂ ಅಬ್ಬರದ ಮಳೆಗೆ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ರಸ್ತೆ ಕೊಚ್ಚಿಗೆ ಹೋಗಿದ್ದು, ಇದರಿಂದ ಮಹೀಂದ್ರಾ ಪಿಕ್‌ಆಪ್‌ ವಾಹನವು ಕಂದಕಕ್ಕೆ ಉರುಳಿದೆ. ಅದೃಷ್ಟಾವಶಾತ್‌ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.