ರಾಜ್ಯ

ಬೆಂಗಳೂರು: ಮದುವೆ ಆಗಬೇಡ ಎಂದು ಷರತ್ತು ವಿಧಿಸಿದ ಅಕ್ಕನನ್ನೆ ಕೊಂದ ತಮ್ಮ

ಮದುವೆಯಾಗಬೇಡ ಎಂದು ಷರತ್ತು ವಿಧಿಸಿದ್ದ ಹಿನ್ನೆಲೆಯಲ್ಲಿ ತಮ್ಮನೊಬ್ಬ ತನ್ನ ಸ್ವಂತ ಅಕ್ಕನನ್ನೇ ಉಸಿರುಗಟ್ಟಿಸಿ ಕೊಲೆ ...

ಬೆಂಗಳೂರು: ಮದುವೆ ಆಗಬೇಡ ಎಂದು ಷರತ್ತು ವಿಧಿಸಿದ ಅಕ್ಕನನ್ನೆ ಕೊಂದ ತಮ್ಮ
ಕೊಲೆಯಾದ ಮಹಾಲಕ್ಷ್ಮಿ ಮತ್ತು ಆರೋಪಿ ಶಿವಕುಮಾರ್
Published On :
ಬೆಂಗಳೂರು: ಮದುವೆಯಾಗಬೇಡ ಎಂದು ಷರತ್ತು ವಿಧಿಸಿದ್ದ ಹಿನ್ನೆಲೆಯಲ್ಲಿ ತಮ್ಮನೊಬ್ಬ ತನ್ನ ಸ್ವಂತ ಅಕ್ಕನನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಸಿಟಿ ಮಾರ್ಕೆಟ್ ಸಮೀಪದ ಅಂಚೆಪೇಟೆ ನಿವಾಸಿಯಾದ ಶಿವಕುಮಾರ್, ಜೂನ್ 28ರಂದು ಅಕ್ಕ ಮಹಾಲಕ್ಷ್ಮಿ (28) ಅವರನ್ನು ಕೊಂದಿದ್ದರು. ಅಲ್ಲದೇ, ಅದು ‘ಸಹಜ ಸಾವು’ ಎಂದು ಬಿಂಬಿಸಲು ಪ್ರಯತ್ನ ನಡೆಸಿದ್ದ. 
ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಕೊಟ್ಟ ವೈದ್ಯಕೀಯ ವರದಿಯು ಸಾವಿನ ರಹಸ್ಯ ಬಯಲು ಮಾಡಿತು. ಆ ವರದಿ ಕೈಸೇರಿದ ಬಳಿಕ ಪೊಲೀಸರು ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಹಿಂದಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ಆರು  ವರ್ಷಗಳ ಹಿಂದೆ ಅಮ್ಮ ಅನಾರೋಗ್ಯದಿಂದ ಮೃತಪಟ್ಟರು. ಅವರ ಸಾವಿನ ಆಘಾತದಲ್ಲಿದ್ದ ಅಕ್ಕ, ದಿನ ಕಳೆದಂತೆ ಅದೇ ನೋವಿನಲ್ಲಿ ಖಿನ್ನತೆಗೆ ಒಳಗಾದಳು. ಮನೆಯಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಬಿಸಾಡುತ್ತ, ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ, ಮಾನಸಿಕ ಅಸ್ವಸ್ಥೆಯಂತೆ ವರ್ತಿಸಲು ಆರಂಭಿಸಿದಳು. ಅಕ್ಕನನ್ನು ನೋಡಿಕೊಳ್ಳಲು ನಾನು ಅಥವಾ ಅಪ್ಪ ಇರಲೇಬೇಕಿತ್ತು. ಒಂದು ಕ್ಷಣ ಒಂಟಿಯಾಗಿ ಬಿಟ್ಟರೂ, ಏನಾದರೊಂದು ಅನಾಹುತ ಮಾಡಿರುತ್ತಿದ್ದಳು. 
ನಾನು ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಕೆಲಸಕ್ಕೆ ಹೋಗದೆ ತನ್ನೊಂದಿಗೇ ಇರುವಂತೆ ಅಕ್ಕ ತಾಕೀತು ಮಾಡಿದ್ದಳು. ಇಷ್ಟು ವರ್ಷ ಆಕೆಯ ಸೇವೆಯಲ್ಲೇ ಮುಳುಗಿ ಹೋಗಿದ್ದ ನನಗೆ, ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಯಿತು. ಕ್ರಮೇಣ ಅಕ್ಕನ ಮೇಲೆ ವಿಪರೀತ ಸಿಟ್ಟು ಬರಲಾರಂಭಿಸಿತು. ನಾನೂ ಮದುವೆಯಾಗಿಲ್ಲ. ನೀನು ಸಹ ಮದುವೆ ಆಗಬಾರದು. ನೀನು ವಿವಾಹವಾಗಿ ಹೆಂಡತಿ ಜತೆ ಇರಬಾರದು ಎಂದು ಷರತ್ತು ವಿಧಿಸಿದ್ದಳು. ಹೀಗಾಗಿ ಬಂದ ಅನೇಕ ಮದುವೆ ಪ್ರಸ್ತಾಪಗಳನ್ನು
ನಿರಾಕರಿಸಲಾಗಿತ್ತು.
ಜೂನ್ 28ರ ಮಧ್ಯಾಹ್ನ 2 ಗಂಟೆಗೆ ಅಕ್ಕ ಕೋಣೆಯಲ್ಲಿ ಮಲಗಿದ್ದಳು. ಆಗ ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದೆ.  ನಂತರ ಆ ವೈರನ್ನು ಅಲ್ಮೆರಾದಲ್ಲಿ ಬಚ್ಚಿಟ್ಟು ಮನೆಯಿಂದ ಹೊರ ಹೋಗಿದ್ದೆ’ ಎಂದು ಶಿವಕುಮಾರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಸಂಜೆ 6 ಗಂಟೆ ಸುಮಾರಿಗೆ ತಂದೆ ನಂಜುಂಡಪ್ಪ ಅವರು ಮಗಳಿಗೆ ಕಾಫಿ ಕುಡಿಸಲು ಆ ಕೋಣೆಗೆ ತೆರಳಿದ್ದರು. ಎದ್ದೇಳಿಸಲು ಎಷ್ಟೇ ಪ್ರಯತ್ನಿಸಿದರೂ, ಪ್ರತಿಕ್ರಿಯೆ ಬರದಿದ್ದಾಗ ಗಾಬರಿಯಿಂದ ಮಗ ಶಿವಕುಮಾರ್‌ಗೆ ಕರೆ ಮಾಡಿದ್ದರು. ತಕ್ಷಣ ಮನೆಗೆ ಬಂದ ಅವರು, ಏನೂ ಗೊತ್ತಿಲ್ಲದವರಂತೆ ನಟಿಸಿದ್ದರು. ಅಲ್ಲದೆ, ಸ್ನೇಹಿತನ ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಹಾಲಕ್ಷ್ಮಿ ಕೊನೆಯುಸಿರೆಳೆದಿರುವುದನ್ನು ದೃಢಪಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಮಹಾಲಕ್ಷ್ಮಿ ಸಾವಿನ ಕುರಿತು ಆಸ್ಪತ್ರೆಯಿಂದ ಅದೇ ದಿನ ರಾತ್ರಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಮೆಮೋ ಹೋಯಿತು. ಜೂನ್ 30ರಂದು ತಂದೆ ನಂಜುಂಡಪ್ಪ ಸಹ ಠಾಣೆಗೆ ತೆರಳಿ, ಮಗಳ ಸಾವಿನ ಬಗ್ಗೆ ಮಾಹಿತಿ ನೀಡಿ ಬಂದಿದ್ದರು.
ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಮಹಾಲಕ್ಷ್ಮಿ ಅವರದ್ದು ಸಹಜ ಸಾವಲ್ಲ. ಕುತ್ತಿಗೆ ಬಿಗಿದಿರುವುದರಿಂದ ಉಸಿರಾಡಲು ಸಾಧ್ಯವಾಗದೆ ಸಾವಿಗೀಡಾಗಿದ್ದಾರೆ. ಯಾರೋ ಕೊಲೆ ಮಾಡಿರುವ ಸಾಧ್ಯತೆ ಇದೆ’ ಎಂಬ ಆಘಾತಕಾರಿ ವರದಿಯನ್ನು  ಪೊಲೀಸರಿಗೆ ನೀಡಿದರು.
ವರದಿ ಬಂದ ಬಳಿಕ ಮೃತರ ತಂದೆ ಹಾಗೂ ಶಿವಕುಮಾರ್ ನನ್ನು ವಿಚಾರಣೆ ನಡೆಸಿದೆವು. ಈ ವೇಳೆ ಆತ ತಾನು ಮಾಡಿದ ತಪ್ಪು ಒಪ್ಪಿಕೊಂಡಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.