ರಾಜ್ಯ

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಶಾಲಾ ಬಸ್ಸು ಚಾಲಕ ಬಂಧನ

ಮೂರೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಶಾಲೆಯ ಬಸ್ಸಿನ...

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಶಾಲಾ ಬಸ್ಸು ಚಾಲಕ ಬಂಧನ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಮೂರೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಶಾಲೆಯ ಬಸ್ಸಿನ ಚಾಲಕನನ್ನು ಬಂಧಿಸಿದ ಘಟನೆ ನಗರದ ಆಗ್ನೇಯ ಭಾಗದಲ್ಲಿ ನಿನ್ನೆ ನಡೆದಿದೆ. 
ಈ ಘಟನೆ ಮೊನ್ನೆ ಸಂಜೆ ನಡೆದಿತ್ತು. ಮಗು ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಬಸ್ಸಿನ ಚಾಲಕ ಆಕೆಯ ದೇಹದ ಅನುಚಿತ ಸ್ಥಳಗಳನ್ನು ಸ್ಪರ್ಶಿಸಿ ಹಲ್ಲೆ ಮಾಡಿದ್ದನಂತೆ. ಮನೆಗೆ ಬಂದ ನಂತರ ಮಗು ತಾಯಿಗೆ ಬಸ್ಸಿನ ಚಾಲಕನ ವರ್ತನೆ ಬಗ್ಗೆ ಹೇಳಿದ್ದಾಳೆ. 
ಮಗುವಿನ ತಾಯಿ ಅಂಗಿ ತೆಗೆದು ನೋಡಿದಾಗ ಖಾಸಗಿ ಅಂಗಗಳಲ್ಲಿ ತಿರುಚಿದ ಗಾಯಗಳಾಗಿ ಮಗುವಿಗೆ ನೋವಾಗುತ್ತಿದ್ದುದು ಗಮನಕ್ಕೆ ಬಂತು. ಮಗುವನ್ನು  ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು. ನಿನ್ನೆ ಬೆಳಗ್ಗೆ ಬಂದು ಪೊಲೀಸರು ಶಾಲೆಯ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಯಾವುದೇ ಸಾಕ್ಷಿಗಳು ಸಿಗಲಿಲ್ಲ. ಮಗುವಿನಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಹೇಳಿದಾಗ ಬಸ್ ಚಾಲಕ ಆಶುತೋಷ್ ನ ಕಡೆ ಬೆರಳು ತೋರಿಸಿದಳು.
ಹೆಣ್ಣು ಮಗುವಿನ ಪರವಾಗಿ  ಸಾಕ್ಷಿಗಳ ಹೇಳಿಕೆ ಪಡೆದ ಪೊಲೀಸರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲು ಕಸ್ಟಡಿಗೆ ಕರೆದೊಯ್ದಿದ್ದಾರೆ. ಶಾಲೆಯ ಮುಖ್ಯಸ್ಥರು ಮಕ್ಕಳ ಸಾರಿಗೆ ವ್ಯವಸ್ಥೆಯನ್ನು ಹೊರಗುತ್ತಿಗೆ ನೀಡಿದ್ದರು. ಹೊರಗುತ್ತಿಗೆ ಸಂಸ್ಥೆಗಳು ಚಾಲಕರನ್ನು ನೇಮಿಸುವಾಗ ಅವರ ಹಿನ್ನೆಲೆ ತಿಳಿದುಕೊಂಡು ಕೆಲಸಕ್ಕೆ ತೆಗೆದುಕೊಂಡಿದ್ದಾರೆಯೇ ಎಂದು ಶಾಲೆಯ ಅಧಿಕಾರಿಗಳು ವಿಚಾರಿಸಿಲ್ಲ. 
ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.