ಚಿನ್ನದ ಸರ ಕಸಿದ ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ದಿಟ್ಟ ಮಹಿಳೆ!
ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಮಹಿಳೆಯೊಬ್ಬರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುರವ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಮೈಸೂರು: ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಮಹಿಳೆಯೊಬ್ಬರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುರವ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಎಂಟೆಕ್ ವಿದ್ಯಾರ್ಥಿನಿ ನವ್ಯಾ ಎಂಬುವವರು ನಿನ್ನೆ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯಕ್ಕೆ ಆಗಮಿಸಿದ್ದು. ಈ ವೇಳೆ ಪಾಂಡವಪುರ ತಾಲ್ಲೂಕು ಸಣಬಾ ಗ್ರಾಮದ ಯುವಕನೊಬ್ಬ ಸರ ಕಸಿದು ಪರಾರಿಯಾಗಲೆತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತ ನವ್ಯಾ ಆತನನ್ನು ಬೆನ್ನಟ್ಟಿ ಗಟ್ಟಿಯಾಗಿ ಹಿಡಿದು ಕೂಗಾಡಿದ್ದಾರೆ. ಈ ವೇಳೆ ಸ್ಥಳೀಯರು ನವ್ಯಾ ನೆರವಿಗೆ ಧಾವಿಸಿದ್ದು, ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸರಗಳ್ಳನನ್ನು ಹಿಡಿದ ಮಹಿಳೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು ಮೂಲದ ನವ್ಯಾ ಎಂಟೆಕ್ ವಿದ್ಯಾರ್ಥಿನಿಯಾಗಿದ್ದು, ಮಹಾಲಕ್ಷ್ಮೀ ಲೇಔಟ್ ನ ನಿವಾಸಿಯಾಗಿದ್ದಾರೆ. ಮೈಸೂರಿಗೆ ಪ್ರವಾಸಕ್ಕೆಂದು ತಮ್ಮ ಪತಿ ಹಾಗೂ ತಂಗಿಯೊಂದಿಗೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಶ್ರೀರಂಗಪಟ್ಟಣದ ಕುಟುಂಬ ನಿಮಿಷಾಂಬ ದೇಗುಲಕ್ಕೆ ತೆರಳಿದ್ದರು. ಕಾರನ್ನು ಪಾರ್ಕ್ ಮಾಡುತ್ತಿದ್ದ ವೇಳೆ ಅಲ್ಲಿ ವ್ಯಕ್ತಿಯೋರ್ವ ತನ್ನ ಬೈಕ್ ಸ್ಟ್ಯಾಂಡ್ ಹಾಕಿ ನೇರವಾಗಿ ಕಾರಿನ ಬಳಿ ಬಂದು ಮಾತನಾಡಿಸಿದ. ನೀವು ಎಲ್ಲಿಯವರು ಎಂದು ಕೇಳಿದ. ಆತನ ಪ್ರಶ್ನೆಗೆ ನವ್ಯಾ ಉತ್ತರಿಸುತ್ತಿದ್ದ ಸಂದರ್ಭದಲ್ಲೇ ನವ್ಯಾ ಅವರ ಕುತ್ತಿಗೆಗೆ ಕೈಹಾಕಿದ ದುಷ್ಕರ್ಮಿ ಸುಮಾರು 70 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗ ತೊಡಗಿದ.
ಕಾರಿನ ಹಿಂದೆ ನಿಲ್ಲಿಸಿದ್ದ ತನ್ನ ಬೈಕ್ ಏರಿ ಪರಾರಿಯಾಗುತ್ತಿದ್ದಾಗ ಕೂಡಲೇ ಆತನನ್ನು ಬೆನ್ನಟ್ಟಿ ಹಿಡಿದ ನವ್ಯಾ ನೆರವಿಗಾಗಿ ಕೂಗಿ ಕೊಂಡಿದ್ದಾರೆ. ನವ್ಯಾ ಅವರ ಕೂಗನ್ನು ಕೇಳಿದ ಸ್ಥಳೀಯರು ಕಳ್ಳನನ್ನು ಹಿಡಿದುಕೊಂಡಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಶ್ರೀರಂಗ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


