ರಾಜ್ಯ

ವಿದ್ಯುತ್ ಅವಘಡ: ಮಂಗಳೂರಿನಲ್ಲಿ ಒಂದೇ ಕುಟುಂಬದ ಮೂವರ ಸಾವು!

ಭೀಕರ ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಂಗಳೂರಿನ ಉಜ್ಜೋಡಿಯಲ್ಲಿ ನಡೆದಿದೆ.

ವಿದ್ಯುತ್ ಅವಘಡ: ಮಂಗಳೂರಿನಲ್ಲಿ ಒಂದೇ ಕುಟುಂಬದ ಮೂವರ ಸಾವು!
ಸಾಂದರ್ಭಿಕ ಚಿತ್ರ
Published On :

ಮಂಗಳೂರು: ಭೀಕರ ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಂಗಳೂರಿನ ಉಜ್ಜೋಡಿಯಲ್ಲಿ ನಡೆದಿದೆ.

ಉಜ್ಜೋಡಿ ನಿವಾಸಿಗಳಾದ ವಲೇರಿಯನ್ ಲೋಬೊ(55) ಹಾಗೂ ಅವರ ಪತ್ನಿ ಹೆಸ್ಮಿ ಲೋಬೊ(51) ಮತ್ತು ಮೂಡುಬಿದಿರೆಯ ಸಂದೀಪ್(28) ಎಂಬುವವರು ಸಾವನ್ನಪ್ಪಿದ್ದು, ತೆಂಗಿನ ಮರಕ್ಕೆ ಹಾಕಿದ್ದ ಕಬ್ಬಿಣದ ಏಣಿ ಹತ್ತುವಾಗ ಈ  ಘಟನೆ ಸಂಭವಿಸಿದೆ.

ಸ್ಥಳೀಯರು ತಿಳಿಸಿರುವಂತೆ ಮನೆಯ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಹಾಕಿದ್ದ ಕಬ್ಬಿಣದ ಏಣಿ ಹತ್ತಿದ ಸಂದೀಪ್ ಕಾಳು ಮೆಣಸು ತೆಗೆಯಲು ಆರಂಭಿಸಿದ್ದಾರೆ. ಈ ವೇಳೆ ಏಣಿ ಆಯತಪ್ಪಿ ಮನೆಯ ಸಮೀಪದಲ್ಲಿ ಹಾದು ಹೋಗಿದ್ದು  ಹೈಟೆನ್ಷನ್ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಆಗ ವಿದ್ಯುತ್ ಪ್ರವಹಸಿದ್ದು, ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಳಗೆ ಏಣಿ ಹಿಡಿದಿದ್ದ ವಲೇರಿಯನ್ ಲೋಬೋ ಅವರಿಗೂ ವಿದ್ಯುತ್ ಪ್ರವಹಸಿದ್ದು, ಅವರನ್ನು ಕಾಪಾಡಲು ಬಂದ  ಅವರ ಪತ್ನಿ ಹೆಸ್ಮಿ ಲೋಬೋ ಅವರೂ ಕೂಡ ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಉಜ್ಜೋಡಿಯಲ್ಲಿ ಮನೆಯ ಸಮೀಪದಲ್ಲಿಯೇ ಹೈ ಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಸ್ಥಳೀಯ ವಿದ್ಯುತ್ ಇಲಾಖೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.