ಹೊಸಕೆರೆ ಹಳ್ಳಿ ಕೆರೆಯಲ್ಲಿ ಸಿಕ್ಕಿದ್ದು 800 ವರ್ಷಗಳ ಪುರಾತನ ಚೋಳರ ಕಾಲದ ಮಂಟಪ
ನಗರದ ಹೊಸಕೆರೆ ಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ 800 ವರ್ಷಗಳಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು...

ಬೆಂಗಳೂರು: ನಗರದ ಹೊಸಕೆರೆ ಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ 800 ವರ್ಷಗಳಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪುರಾತನ ಗಂಗಮ್ಮನ ಮಂಟಪದ ಸ್ಥಳಕ್ಕೆ ಬುಧವಾರ ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಮಂಟಪವು ಕೆಂಪೇಗೌಡರ ಕಾಲದ್ದು ಎಂದು ಸ್ಥಳೀಯರು ಮಾತನಾಡುತ್ತಿದ್ದರು. ಹೀಗಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆವು. ಆದರೆ, ಇದು ಚೋಳರ ಕಾಲದ್ದು ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಟಪದ ತುಂಬೆಲ್ಲ ನೀರಿದೆ. ನೀರು ಬರದಂತೆ ಸುತ್ತಲೂ ಕಟ್ಟೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮಂಟಪವನ್ನು ಭೂಮಿಯಿಂದ ಹೊರ ತೆಗೆಯಲು ಸಾಧ್ಯವಿಲ್ಲ. ಹೀಗಾಗಿ ಅದು ಇರುವ ಸ್ಥಳದಲ್ಲೇ ಸೂಕ್ತ ವ್ಯವಸ್ಥೆ ಮೂಲಕ ಮಂಟಪಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಈ ಮಂಟಪ ಸ್ಥಳೀಯರಿಂದ ಗಂಗಮ್ಮನ ತೊಟ್ಟಿಲು ಎಂದು ಪ್ರಸಿದ್ಧವಾಗಿದೆ. ನಾಲ್ಕು ಕಂಬಗಳಿದ್ದು, ಈ ಕಲ್ಲು ಕಂಬಗಳ ಮೇಲೆ ಕೆತ್ತನೆಯಿರುವ ಕಲ್ಲಿನ ಚಪ್ಪಡಿಗಳಿವೆ,ಇದೇ ರೀತಿಯ ಮಂಟಪಗಳು ಮೈಸೂರು, ಮೇಲುಕೋಟೆ , ಮನ್ಮಥಕೊಂಡ ಮತ್ತು ಹಂಪಿ ಸೇರಿದಂತೆ ಹಲವು ಕಡೆ ಇವೆ. ಇಲ್ಲಿನ ಶಿಲ್ಪಕಲೆ ತುಂಬಾ ವಿಭಿನ್ನವಾಗಿದ್ದು, ತುಂಬಾ ಆಸಕ್ತಿದಾಯಕವಾಗಿವೆ. ಶಾಸನಗಳ ಉತ್ಖನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೋಪಾಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


