ರಾಜ್ಯ

ಬೆಂಗಳೂರಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್, ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ನಗರದ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಅದರ ಅಧ್ಯಕ್ಷರ ಮನೆ ಮೇಲೆ...

ಬೆಂಗಳೂರಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್, ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ
ಕೋ-ಆಪರೇಟಿವ್ ಸೊಸೈಟಿ
Published On :
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ನಗರದ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಅದರ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ ಮಲ್ಲೇಶ್ವರಂನ 8ನೇ ಕ್ರಾಸ್‌ನಲ್ಲಿರುವ ವಾಸವಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಅದರ ಅಧ್ಯಕ್ಷ ಆರ್ ಪಿ ರವಿ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟ್ ಬ್ಯಾನ್ ಆದ ಬಳಿಕ ಹಾಗೂ ನವೆಂಬರ್ ಮತ್ತು ಏಪ್ರಿಲ್‌ನ ಚಲಾವಣೆ ಖಾತೆಗಳ ಬಗ್ಗೆ ಮಾಹಿತಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ  266 ಕೋ ಅಪರೇಟಿವ್ ಬ್ಯಾಂಕ್‌ಗಳ ಪೈಕಿ 61 ಕೋ ಅಪರೇಟಿವ್ ಬ್ಯಾಂಕ್‌ಗಳು ಮಾಹಿತಿ ನೀಡಿರಲಿಲ್ಲ. ಈ ಉಳಿದ  61 ಬ್ಯಾಂಕ್‌ಗಳ ಪೈಕಿ ವಾಸವಿ  ಕ್ರೆಡಿಟ್ ಕೋ ಅಪರೇಟಿವ್ ಕೂಡ ಒಂದಾಗಿತ್ತು . ಹೀಗಾಗಿ ಐಟಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.  
ಆದಾಯ ತೆರಿಗೆ ಇಲಾಖೆ ದಾಳಿ ಖಚಿತಪಡಿಸಿದ್ದು, ದಾಳೆಯ ವೇಳೆ ಕೋ ಅಪರೇಟಿವ್ ಸೊಸೈಟಿಯಲ್ಲಿ ಪತ್ತೆಯಾದ ಅಕ್ರಮ ಅಕೌಂಟ್‌ಗಳ ಬಗ್ಗೆ ಹಾಗೂ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ 50 ಕೋಟಿಯಷ್ಟು ಅಕ್ರಮ ಆಸ್ತಿ ಮತ್ತು 75 ನಕಲಿ ಅಕೌಂಟ್‌ಗಳು  ಪತ್ತೆಯಾಗಿವೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.