ಪದವಿ ಕಾಲೇಜು ಕ್ಯಾಂಪಸ್ ಗಳಿಗೆ ಹೊರಗಿನವರಿಗೆ ಮುಕ್ತ ಪ್ರವೇಶವಿಲ್ಲ: ಕಾಲೇಜು ಶಿಕ್ಷಣ ಇಲಾಖೆ ನಿಯಮ
ಇನ್ನು ಮುಂದೆ ರಾಜ್ಯದ ಡಿಗ್ರಿ ಕಾಲೇಜು ಕ್ಯಾಂಪಸ್ ಗಳ ಒಳಗೆ ಪ್ರವೇಶಿಸುವವರು ಪ್ರಾಂಶುಪಾಲರ...

Published On :
ಬೆಂಗಳೂರು: ಇನ್ನು ಮುಂದೆ ರಾಜ್ಯದ ಡಿಗ್ರಿ ಕಾಲೇಜು ಕ್ಯಾಂಪಸ್ ಗಳ ಒಳಗೆ ಪ್ರವೇಶಿಸುವವರು ಪ್ರಾಂಶುಪಾಲರ ಸಮ್ಮತಿ ತೆಗೆದುಕೊಳ್ಳದೆ ಒಳಹೋದರೆ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಹೋಗಬೇಕಾಗುತ್ತದೆ.
ಡಿಗ್ರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಹೆಣ್ಣು ಮಕ್ಕಳ ರಕ್ಷಣೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ, ಕಾಲೇಜು ಕ್ಯಾಂಪಸ್ ಒಳಗೆ ಹೊರಗಿನವರು ಪ್ರವೇಶಿಸಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಸದ್ಯದಲ್ಲಿಯೇ ಕಾಲೇಜುಗಳನ್ನು ತಲುಪಲಿದೆ.
ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಡಾ.ಅಜಯ್ ನಾಗಭೂಷಣ ಮಾತನಾಡಿ, ಕ್ಯಾಂಪಸ್ ಗಳಲ್ಲಿ ಹುಡುಗಿಯರ ರಕ್ಷಣೆಗಾಗಿ ಈ ಕಾನೂನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ಕಾಲೇಜುಗಳು ಸೂಕ್ತ ಭದ್ರತೆಗಳನ್ನು ಒಳಗೊಂಡಿರುತ್ತವೆ.ಹೆಚ್ಚಿನ ಉನ್ನತ ಮಟ್ಟದ ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಭದ್ರತಾ ಸಿಬ್ಬಂದಿಗಳಿರುತ್ತಾರೆ. ಆದರೆ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳಲ್ಲಿ ಸರಿಯಾದ ಭದ್ರತೆ ಸೂಕ್ತ ರಕ್ಷಣೆಗಳಿರುವುದಿಲ್ಲ. ಇದುವರೆಗೆ ಕಾಲೇಜು ಆಡಳಿತ ವರ್ಗ ಅಥವಾ ವಿದ್ಯಾರ್ಥಿಗಳ ಕಡೆಯಿಂದ ನಿರ್ದಿಷ್ಟ ದೂರುಗಳು ಬಂದಿಲ್ಲ. ಆದರೂ ಕೂಡ ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕೆಲವು ಕಾಲೇಜುಗಳಲ್ಲಿ ಸರಿಯಾದ ಕಂಪೌಂಡ್ ಗಳೇ ಇರುವುದಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ಅಭಿವೃದ್ಧಿ ನಿಧಿಯಡಿ ಕಾಲೇಜು ಕ್ಯಾಂಪಸ್ ಗಳಿಗೆ ಭದ್ರತೆ ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ವಿದ್ಯಾರ್ಥಿಗಳು ಕಾಲೇಜು ಅವಧಿಯಲ್ಲಿ, ಕ್ಯಾಂಪಸ್ ಒಳಗೆ ಗುರುತು ಪತ್ರವನ್ನು ಕಡ್ಡಾಯವಾಗಿ ಧರಿಸಬೇಕೆಂದು ಇಲಾಖೆ ಕಾನೂನು ಹೊರಡಿಸಲಿದೆ.
ಕರ್ನಾಟಕ ರಾಜ್ಯದಲ್ಲಿ 411 ಸರ್ಕಾರಿ ಡಿಗ್ರಿ ಕಾಲೇಜುಗಳಿದ್ದು 3.04 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 1.737 ಲಕ್ಷ ಹುಡುಗಿಯರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
permissionಅನುಮತಿcampusಪದವಿ ಕಾಲೇಜುಕ್ಯಾಂಪಸ್ಪ್ರವೇಶdegree collegeEntryCollegiate education departmentಕಾಲೇಜು ಶಿಕ್ಷಣ ಇಲಾಖೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


