ಪದವಿ ಕಾಲೇಜು

ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲ ಹುದ್ದೆ ಭರ್ತಿಗೆ ಹೊಸ ನಿಯಮ: ಉಪನ್ಯಾಸಕರ ತೀವ್ರ ವಿರೋಧ
2009 ರವರೆಗೆ, ಪ್ರಾಂಶುಪಾಲರನ್ನು ಬಡ್ತಿ ಆಧಾರದ ಮೇಲೆ ನೇಮಿಸಲಾಗುತ್ತಿತ್ತು. ಸೇವಾ ಹಿರಿತನದ ಆಧಾರದ ಮೇಲೆ ಹೆಚ್ಚಿನ ಉಪನ್ಯಾಸಕರು ಪ್ರಾಂಶುಪಾಲರಾಗುತ್ತಿದ್ದರು. ಈ ಅವಧಿಯಲ್ಲಿ ಪ್ರಾಂಶುಪಾಲರಾಗಿ ಬಡ್ತಿ ಪಡೆದವರು 2013ರ ವೇಳೆಗೆ ನಿವೃತ್ತರಾಗಿದ್ದಾರೆ.

ಪಿಯುಸಿ ಕಾಲೇಜುಗಳೇ ಇಲ್ಲದ ಊರುಗಳಿಗೂ ಪದವಿ ಕಾಲೇಜು ಮಂಜೂರು ಮಾಡಿದ್ದರು, ಅದನ್ನು ಸರಿಪಡಿಸುತ್ತಿದ್ದೇವೆ: ಸಿಎಂ ಬೊಮ್ಮಾಯಿ
ಯಾರದ್ದೋ ಒತ್ತಡಕ್ಕೆ ಮಣಿದು ಪದವಿ ಪೂರ್ವ(ಪಿಯು) ಕಾಲೇಜುಗಳೇ ಇಲ್ಲದ ಊರುಗಳಿಗೂ ಪದವಿ ಕಾಲೇಜು ಮಂಜೂರು ಮಾಡಿದ್ದರು. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.

ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ದತ್ತು ಪಡೆಯಲು ಅಧಿಕಾರಿಗಳಿಗೆ ಸೂಚನೆ
ತಾಲೂಕು ಹಾಗೂ ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ರಾಜ್ಯದಲ್ಲಿ ಒಂದು ಪದವಿ ಪೂರ್ವ ಕಾಲೇಜು ಹಾಗೂ ಶಾಲೆಯನ್ನು ದತ್ತು ಪಡೆಯಲು ಸೂಚಿಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಆದೇಶಿಸಿದ್ದಾರೆ.

ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಕುರಿತು ಕೇಂದ್ರದ ನಿಲುವನ್ನು ಕೇಳಿದ ಕರ್ನಾಟಕ ಹೈಕೋರ್ಟ್!
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ 2021-22ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿ ಮಾಡುವ ಕುರಿತು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದೆ.

ಅನ್ ಲಾಕ್ 4.O: ನಾಳೆಯಿಂದಲೇ ಥಿಯೇಟರ್ ಓಪನ್, ಜುಲೈ 26 ರಿಂದ ಪದವಿ ಕಾಲೇಜು ಪ್ರಾರಂಭ, ನೈಟ್ ಕರ್ಫ್ಯೂ 1 ಗಂಟೆ ಸಡಿಲ
ರಾಜ್ಯದಲ್ಲಿ ಅನ್ ಲಾಕ್ 4.O ಜಾರಿಗೆ ಮಾರ್ಗಸೂಚಿ ಆದೇಶ ಹೊರಬಂದಿದ್ದು ನಾಳೆಯಿಂದಲೇ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ ಗಳು ಪ್ರೇಕ್ಷಕರಿಗೆ ತೆರೆಯಲಿದೆ. ಅಲ್ಲದೆ ಜುಲೈ 26 ರಿಂದ ಪದವಿ ಕಾಲೇಜು ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ.

ಕಾಲೇಜಿಗೆ ಮರಳುವಂತೆ ಉಪನ್ಯಾಸಕರಿಗೆ ಸೂಚನೆ
ಆಫ್ ಲೈನ್ ತರಗತಿಗಳಿಗೆ ಕಾಲೇಜುಗಳ ಮತ್ತೆ ತೆರೆಯಲು ತಯಾರಿ ನಡೆಸಲು, ಅನುದಾನಿತ ಮತ್ತು ಸರ್ಕಾರಿ ಕಾಲೇಜಿನ ಉಪನ್ಯಾಸಕರು ಕೆಲಸಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ.

ಪದವಿ ಕಾಲೇಜು ಆರಂಭ ಸದ್ಯಕ್ಕಿಲ್ಲ; ಶೇ.65.14ರಷ್ಟು ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗೆ ಲಸಿಕೆ: ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ
ರಾಜ್ಯದಲ್ಲಿ ಪದವಿ ಕಾಲೇಜುಗಳ ತರಗತಿಗಳ ಆರಂಭದ ಬಗ್ಗೆ ಸದ್ಯ ಯಾವುದೇ ತೀರ್ಮಾನ ವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

4 ಸಾವಿರಕ್ಕೂ ಹೆಚ್ಚು ಕಿರಿಯ ಅತಿಥಿ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಆತಂಕ!
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 10-15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಮಾರು 4,000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಇನ್ನು ಬೆಳಗ್ಗೆ 8 ಗಂಟೆಗೇ ಪದವಿ ಕಾಲೇಜು ಆರಂಭ!
ಇನ್ನು ಮುಂದೆ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಬೆಳಗ್ಗೆ 8 ಗಂಟೆಯಿಂದಲೇ ಪ್ರಾರಂಭವಾಗಲಿದ್ದು, ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ (ಪದವಿ) ನೂತನ ಸು್ತೋಲೆಯೊಂದನ್ನು ಗುರುವಾರ ಹೊರಡಿಸಿದೆ.

