ರಾಜ್ಯ

ಹೊಸ ವರ್ಷದಂದು ನಮ್ಮ ಮೆಟ್ರೋ ದಾಖಲೆ: 2 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆ

ಹೊಸ ವರ್ಷದಂದು ನಮ್ಮ ಮೆಟ್ರೋ ಹೊಸ ದಾಖಲೆ ನಿರ್ಮಿಸಿದ್ದು ಪ್ರಯಾಣಿಕರ ಸಂಖ್ಯೆ 2 ಲಕ್ಷ ದಾಟಿದೆ.

ಹೊಸ ವರ್ಷದಂದು ನಮ್ಮ ಮೆಟ್ರೋ ದಾಖಲೆ: 2 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆ
ನಮ್ಮ ಮೆಟ್ರೋ
Published On :
ಬೆಂಗಳೂರು: ಹೊಸ ವರ್ಷದಂದು ನಮ್ಮ ಮೆಟ್ರೋ ಹೊಸ ದಾಖಲೆ ನಿರ್ಮಿಸಿದ್ದು ಪ್ರಯಾಣಿಕರ ಸಂಖ್ಯೆ 2 ಲಕ್ಷ ದಾಟಿದೆ. ಹೊಸ ವರ್ಷಾಚರಣೆಗೆ ಎಂ ಜಿ ರಸ್ತೆ ಪ್ರಸಿದ್ಧ ಪ್ರದೇಶವಾಗಿದ್ದು, 2017 ರ ಸಂಭ್ರಮಾಚರಣೆಗೆ ಎಂಜಿ ರಸ್ತೆಗೆ ತೆರಳಿದ್ದ ಬಹುತೇಕ ಜನರು ನಮ್ಮ ಮೆಟ್ರೋ ಬಳಕೆ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆ ಶನಿವಾರ ಹಾಗೂ ಭಾನುವಾರ (ಡಿ.31-ಜ.1) ರಂದು ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. 
ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್ ಸಿಎಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ, 2016 ರ ಜುಲೈ.28 ರಂದು ಬಂದ್ ಗೆ ಕರೆ ನೀಡಿದ್ದಾಗ ಮೆಟ್ರೋದಲ್ಲಿ 1,97,928 ಜನರು ಪ್ರಯಾಣಿಸಿದ್ದು ದಾಖಲೆಯಾಗಿತ್ತು. ಈಗ ಪ್ರಯಾಣಿಕರ ಸಂಖ್ಯೆ 2 ಲಕ್ಷ (2,09,732) ದಾಟಿದ್ದು, ಹೊಸ ದಾಖಲೆಯಾಗಿದೆ ಎಂದು ಹೇಳಿದ್ದಾರೆ. 
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31 ರಂದು ಮೆಟ್ರೋ ಸಂಚಾರ ಅವಧಿಯನ್ನು ಮಧ್ಯರಾತ್ರಿ 2 ಗಂಟೆ ವರೆಗೂ ವಿಸ್ತರಿಸಲಾಗಿತ್ತು. ಬಿಎಂಆರ್ ಸಿಎಲ್ ಅಧಿಕಾರಿಗಳ ಪ್ರಕಾರ ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದ್ದು 33,106 ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಉಳಿದಂತೆ ಸಾಮಾನ್ಯ ಅವಧಿಯಲ್ಲಿ  1, 26, 890 ಜನರು ಸಂಚರಿಸಿದ್ದಾರೆ, ಇನ್ನು ಪರ್ಪಲ್ ಲೈನ್ ಹಾಗೂ ಗ್ರೀನ್ ಲೈನ್ ಮೆಟ್ರೋ ಮಾರ್ಗದಲ್ಲಿ (ಮಂತ್ರಿ ಸಂಪಿಗೆ ರಸ್ತೆಯಿಂದ ನಾಗಸಂದ್ರದ ವರೆಗೆ) 1, 59,996 ಜನರು ಪ್ರಯಾಣಿಸಿದ್ದಾರೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 
ಗ್ರೀನ್ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚಾರದ ಅವಧಿಯನ್ನು ವಿಸ್ತರಿಸಲಾಗಿತ್ತಾದರೂ ಆ ವೇಳೆಯಲ್ಲಿ ಕೇವಲ 1,747 ಜನರು ಸಂಚರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದ್ದ ಕ್ರಿಸ್ ಮಸ್ ದಿನವೂ 5,261 ಜನರು  ಹೆಚ್ಚುವರಿಯಾಗಿ ಸಂಚರಿಸಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.