ಗಗನಸಖಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕರ ಬಂಧನ!
ಕುಡಿದ ಮತ್ತಿನಲ್ಲಿ ಗಗನ ಸಖಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಗಗನ ಸಖಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಕಳೆದ ಭಾನುವಾರ ಪ್ರಕರಣ ನಡೆದಿದ್ದಾದರೂ, ಮಂಗಳವಾರ ಪ್ರಕರಣ ಬಯಲಾಗಿದೆ. ಮೂಲಗಳ ಪ್ರಕಾರ ನಾಗಾಲ್ಯಾಂಡ್ ಮೂಲಕ ಅಜಯ್ ಕುಮಾರ್ ಮತ್ತು ಕಲಾ ಪಂಕಜ್ ಎಂಬ ಯುವಕರು ಕಂಠಪೂರ್ತಿ ಕುಡಿದು ವಿಮಾನ ಹತ್ತಿದ್ದಾರೆ. ಬಳಿಕ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಗಗನ ಸಖಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ವಿಮಾನ ಚಲಿಸುತ್ತಿರುವಾಗಲೇ ಮೆನುಕಾರ್ಡ್ ತರುವಂತೆ ಹೇಳಿ ಗಗನ ಸಖಿಯರನ್ನು ಛೇಡಿಸಿದ್ದಾರೆ. ಅಲ್ಲದೆ ಜೋರಾಗಿ ಕೂಗಾಡುತ್ತಾ ವಿಮಾನದಲ್ಲಿದ್ದ ಪೈಲಟ್ ಗಳ ಏಕಾಗ್ರತೆಗೆ ಭಂಗ ತಂದಿದ್ದಾರೆ ಎಂದು ಆರೋಪಿಸಲಾಗಿದೆ.
ಅಜಯ್ ಕುಮಾರ್ ಮತ್ತು ಕಲಾ ಪಂಕಜ್ ಮದುವೆ ನಿಮಿತ್ತ ಹಾಸನಕ್ಕೆ ತೆರಳಬೇಕಿತ್ತು. ಹೀಗಾಗಿ ಅವರು ಗುವಾಹತಿಯಿಂದ ಬೆಂಗಳೂರಿಗೆ ಏರ್ ಎಷ್ಯಾ ವಿಮಾನ ಸಂಖ್ಯೆ ಐ5 1983 ವಿಮಾನದಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ವಿಮಾನದ ಸಿಬ್ಬಂದಿ ವಾಯುಗೋಪುರಕ್ಕೆ ಮಾಹಿತಿ ರವಾನಿಸಿದ್ದು, ವಿಮಾನ ಕೆಂಪೇಗೌಡ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕರ್ನಾಟಕ ಪೊಲೀಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಯುವಕರ ವಿರುದ್ಧ ಏರ್ ಏಷ್ಯಾ ದೂರು ಕೂಡ ದಾಖಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


