ರಾಜ್ಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ ನೌಕಾಪಡೆ ವಿಮಾನದ ಟೈರ್‌ ಸ್ಫೋಟ, 2 ಗಂಟೆ ರನ್ ವೇ ಸ್ಥಗಿತ

ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೌಕಾಪಡೆಯ ಮಿಗ್ 29 ವಿಮಾನ ಮಂಗಳವಾರ ತುರ್ತು ಭೂಸ್ಪರ್ಶ ಮಾಡಿದ....

ಮಂಗಳೂರು ವಿಮಾನ ನಿಲ್ದಾಣದಲ್ಲಿ ನೌಕಾಪಡೆ ವಿಮಾನದ ಟೈರ್‌ ಸ್ಫೋಟ, 2 ಗಂಟೆ ರನ್ ವೇ ಸ್ಥಗಿತ
ಮಂಗಳೂರು ವಿಮಾನ ನಿಲ್ದಾಣ
Published On :
ಮಂಗಳೂರು: ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೌಕಾಪಡೆಯ ಮಿಗ್ 29 ವಿಮಾನ ಮಂಗಳವಾರ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ವಿಮಾನ ಎರಡು ಟಯರ್ ಸ್ಫೋಟಗೊಂಡಿದ್ದು, ರನೇ ವೇಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಂದು ಸಿಬ್ಬಂದಿಗೆ ತರಬೇತಿ ನೀಡಲು ಬಳಸುತ್ತಿದ್ದ ಮಿಗ್‌– 29 ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ಹಿಂಬದಿಯ ಎರಡು ಟಯರ್ ಸ್ಫೋಟಗೊಂಡಿದ್ದು, ಇದರಿಂದ ರನ್ ವೇಗೆ ಹಾನಿಯಾಗಿದೆ. ಹೀಗಾಗಿ ಸುಮಾರು ಎರಡು ಗಂಟೆಗಳ ಕಾಲ ರನ್ ವೇಯನ್ನು ಬಂದ್ ಮಾಡಲಾಗಿತ್ತು.
ಗೋವಾದಿಂದ ಪ್ರಯೋಗಾರ್ಥ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತುರ್ತು ಭೂಸ್ಪರ್ಶಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಂಜೆ 5.35ಕ್ಕೆ ವಿಮಾನ ಇಳಿಯುತ್ತಿದ್ದಾಗ ಟೈರ್‌ ಸ್ಫೋಟಗೊಂಡು ರನ್‌ವೇ ನಡುವೆ ನಿಂತಿದೆ.
ಇತರೆ ವಿಮಾನಗಳು ಪ್ರಯಾಣ ಆರಂಭಿಸಲು ಮತ್ತು ಭೂಸ್ಪರ್ಶ ಮಾಡಲು ಅವಕಾಶವಿಲ್ಲದಂತಾಗಿದ್ದು, ಇಲ್ಲಿಗೆ ಬರಬೇಕಿದ್ದ ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.