ರಾಜ್ಯದ ಇಬ್ಬರು ಕಲಾವಿದರಿಗೆ ಲಲಿತಾ ಕಲಾ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ
ಲಲಿತಾ ಕಲಾ ಅಕಾಡೆಮಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಇಬ್ಬರು ಕಲಾವಿದರು ಭಾಜನರಾಗಿದ್ದಾರೆ. 111 ಮಂದಿ ಪ್ರದರ್ಶಕರಲ್ಲಿ 16 ಮಂದಿಗೆ ರಾಷ್ಟ್ರೀಯ ಪ್ರಶಸ್ತಿ ...

ಬೆಂಗಳೂರು: ಲಲಿತಾ ಕಲಾ ಅಕಾಡೆಮಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಇಬ್ಬರು ಕಲಾವಿದರು ಭಾಜನರಾಗಿದ್ದಾರೆ.111 ಮಂದಿ ಪ್ರದರ್ಶಕರಲ್ಲಿ 16 ಮಂದಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೈಸೂರಿನ ಕೆ. ಸುರೇಶ್, ಹಾಗೂ ಹಾವೇರಿಯ ಸತೀಶ್ ಹನುಮಂತಪ್ಪ ರಾಜ್ಯದ ಇಬ್ಬರು ಕಲಾವಿದರಾಗಿದ್ದಾರೆ, ಉಳಿದಂತೆ ಲಕ್ಷ್ಣಣನ್ ಪ್ರಸಾದ್, ಗುಕನ್ ರಾಜ್ ಕೋಥಂಡರಾಮನ್, ಸಾಜೇಶ್ ಪಾ, ಹರೀಶ್ ಕುಮಾರ್ ಓಜಾ, ಐಶ್ವರ್ಯ ಪರಮಿತಾ ಕೊನ್ವಾರ್, ಮದನ್ ಲಾಲ್, ಸರವಣ ದೇವಸೇಗಾಮಣಿ, ನಿಲ್ಮೋಣಿ ರಾಹಾ, ವಿಜಯ್ ಭಾಗತ್, ಕವಿತಾ ಮೆಹ್ರೋತಾ, ಅನನ್ಯ ದಲಾಲ್, ಅಖಿಲ್ ಮೋಹನ್, ಮತ್ತು ಅನಿಲ್ ಕುಮಾರ್ ಬೋಡ್ ವಾಲ್ ಲಲಿತಾ ಕಲಾ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಲಾವಿದರಾಗಿದ್ದಾರೆ.
ಶುಕ್ರವಾರ ರಾಜ್ಯಪಾಲ ವಜುಬಾಯಿ ರೂಡವಾಲಾ ಈ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಫಲಕ ಹಾಗೂ 1 ಲಕ್ಷ ರು ನಗದು, ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಲಲಿತಾ ಕಲಾ ಅಕಾಡೆಮಿ ಆಯೋಜಿಸಿದ್ದ 58ನೇ ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ 111 ಕಲಾವಿದರು ಸುಮಾರು 6ಸಾವಿರ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು, ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ನೀಡಲು ಅಕಾಡೆಮಿಯ ಮಾನದಂಡದಂತೆ ಕಲಾವಿದರನ್ನು ಆಯ್ಕೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


