ರಾಜ್ಯ

ಬೆಂಗಳೂರು: 11 ವರ್ಷಗಳ ನಂತರ ಸಿಕ್ತು ಕಳ್ಳತನವಾಗಿದ್ದ ಪೊಲೀಸ್ ಪೇದೆ ಗನ್

ಕಳೆದುಹೋಗಿದ್ದ ಪೊಲೀಸ್ ಪೇದೆಯೊಬ್ಬರ ಗನ್ ಸತತ 11 ವರ್ಷಗಳ ನಂತರ ಪತ್ತೆಯಾಗಿದೆ....

ಬೆಂಗಳೂರು: 11 ವರ್ಷಗಳ ನಂತರ ಸಿಕ್ತು ಕಳ್ಳತನವಾಗಿದ್ದ ಪೊಲೀಸ್ ಪೇದೆ ಗನ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಕಳೆದುಹೋಗಿದ್ದ ಪೊಲೀಸ್ ಪೇದೆಯೊಬ್ಬರ ಗನ್ ಸತತ 11 ವರ್ಷಗಳ ನಂತರ ಪತ್ತೆಯಾಗಿದೆ.

2006 ರಲ್ಲಿ ದಶರಥರಾವ್ ಎಂಬ ಪೇದೆ ಬಳಿಯಿಂದ ಅವರ ಸಹೋದ್ಯೋಗಿಯಾಗಿದ್ದ ಪುರುಷೋತ್ತಮ್ ಎಂಬುವರು ಗನ್ ಕದ್ದಿದ್ದರು, ಈ ಆರೋಪದ ಮೇಲೆ ಪೇದೆ ಪುರಷೋತ್ತಮ್ ನನ್ನು ಬಂಧಿಸಲಾಗಿದೆ.

ಪೇದೆ ಪುರುಷೋತ್ತಮ್ ಎಂಬುವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ತನಿಖೆ ನಡೆಸುವಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ನನ್ನ ವೃತ್ತಿ ಜೀವನದಲ್ಲಿ ಗನ್ ಕಳೆದುಕೊಂಡಿದ್ದು ಒಂದು ಕಪ್ಪು ಚುಕ್ಕೆಯಾಗಿತ್ತು, ವೃತ್ತಿಯಲ್ಲಿ ಯಾವುದ್ ಬ್ಲ್ಯಾಕ್ ಮಾರ್ಕ್ ಇಲ್ಲದಂತೆ ನಾನು ನಿವೃತ್ತಿಯಾಗಲು ಬಯಸಿದ್ದೇ, ಈಗ ನಾನು ನೆಮ್ಮದಿಯಾಗಿ ನಿವೃತ್ತಿಯಾಗಬಹುದು ಎಂದು ಗನ್ ಕಳೆದುಕೊಂಡಿದ್ದ ದಶರಥ್ ರಾವ್ ಹೇಳಿದ್ದಾರೆ.

ಸದ್ಯ ನಗರ ಸಶಸ್ತ್ರ ಮೀಸಲು ಪಡೆ ಯಲ್ಲಿ ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರುವ ಆಗಸ್ಟ್ ನಲ್ಲಿ ದಶರಥ ರಾವ್ ನಿವೃತ್ತಿಯಾಗಲಿದ್ದಾರೆ.

ದಶರಥ ರಾವ್ ಮತ್ತು ಪುರುಷೋತ್ತಮ್ ರಾಜಭವನದ ಬಳಿ ಕ್ಷಿಪ್ರ ಕಾರ್ಯಪಡೆಯ ಪೇದೆಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಕ್ಟೋಬರ್ 5 2006 ರಂದು ಬೆಳಗ್ಗೆ 9.30 ಕ್ಕೆ ನಾನು ತಿಂಡಿ ತಿನ್ನಲು ಹೋಗಿದ್ದೆ. ನಾನು ವಾಪಸ್ ಬರುವ ವೇಳೆಗೆ ನನ್ನ ಗನ್ ನಾಪತ್ತೆಯಾಗಿತ್ತು. ನಾನು ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದೆ. ಈ ಸಂಬಂಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದೆ.

ಎಸಿಪಿ ಜೆಜೆ ನಾಯಕ್ ಸೆರ್ಟ್ ವಾರೆಂಟ್ ಜೊತೆಗೆ ನನ್ನ ಮನೆಗೆ ಬಂದಿದ್ದರು. ಈ ವೇಳೆ  ಪುರುಷೋತ್ತಮ್ ಕೂಡ ಆಗಮಿಸಿದ್ದ. ನನ್ನ ಮೇಲೆ ಇಲಾಖೆ ತನಿಖೆ ನಡೆಸಿ 5 ತಿಂಗಳ ಕಾಲ ಸಸ್ಪೆಂಡ್ ಮಾಡಿತು ಎಂದು ದಶರಥ ರಾವ್ ತಿಳಿಸಿದ್ದಾರೆ.

ನನ್ನ ಮೂರು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಾನು 50 ಸಾವಿರ ರುಪಾಯಿ ಸಾಲ ಪಡೆದುಕೊಂಡಿದ್ದೆ. ನನಗೆ ಮಧುಮೇಹ ಕಾಯಿಲೆಯಿತ್ತು, ಶುಗರ್ ಲೆವೆಲ್ ಡೌನ್ ಆಗಿ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನನ್ನ ಹಿರಿಯ ಮಗಳ ಮೇಲೆ ಕುಟುಂಬದ ಜವಾಬ್ದಾರಿ ಬಿತ್ತು. ಓದುತ್ತಿರುವಾಗಲೇ ಆಕೆ ಕೆಲಸ ಮಾಡಲು ಆರಂಭಿಸಿದಳು, ನನಗೆ 21 ಸಾವಿರ ದಂಡ ವಿಧಿಸಲಾಗಿತ್ತು. ಜೊತೆಗೆ ಮುಂದಿನ 3 ವರ್ಷಗಳು ಯಾವುದೇ ಬಡ್ತಿ ಸಿಗಲಿಲ್ಲ. ನನ್ನ ನಿರ್ಲಕ್ಷ್ಯದಿಂದ ನನಗೆ ಎಲ್ಲಾ ಬಡ್ತಿ ಹಾಗೂ ಸೌಲಭ್ಯಗಳು ರದ್ದು ಗೊಂಡವು, ಮತ್ತೆ ನಾನು ಕೆಲಸಕ್ಕೆ ಸೇರಿದೆ. ಆದರೆ ಇಲಾಖೆಯ ಆಂತರಿಕ ತನಿಖೆ ಮುಂದುವರಿದಿತ್ತು ಎಂದು ದಶರಥ್ ರಾವ್ ನೋವು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.