ಶಶಿಕಲಾ ಪಕ್ಕದ ಸೆಲ್ ನಲ್ಲಿದ್ದ ಸೈನೈಡ್ ಮಲ್ಲಿಕಾ ಹಿಂಡಲಗಾ ಜೈಲಿಗೆ ಶಿಫ್ಟ್
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಕೊಠಡಿಯ ಪಕ್ಕದ ಸೆಲ್‌ನಲ್ಲಿದ್ದ ಸರಣಿ ಕೊಲೆಗಳ ಹಂತಕಿ ...

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಕೊಠಡಿಯ ಪಕ್ಕದ ಸೆಲ್‌ನಲ್ಲಿದ್ದ ಸರಣಿ ಕೊಲೆಗಳ ಹಂತಕಿ ಸೈನೈಡ್ ಮಲ್ಲಿಕಾಳನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಮಲ್ಲಿಕಾ ಮೊದಲು ಹಿಂಡಲಗಾ ಜೈಲಿನಲ್ಲೇ ಇದ್ದಳು. ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮೂರು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆತರಲಾಗಿತ್ತು.
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಕಾರಣ ಆಕೆಯನ್ನು ಮತ್ತೆ ಸ್ಥಳಾಂತರ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಶಶಿಕಲಾ ಅವರಿಗೆ ಭದ್ರತೆ ಒದಗಿಸುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.
ಶಶಿಕಲಾ ಮತ್ತು ಮಲ್ಲಿಕಾ ಜೈಲಿನಲ್ಲಿ ಒಳ್ಳೆಯ ಗೆಳೆಯರಾಗಿದ್ದರು. ಶಶಿಕಲಾರನ್ನ ಕ್ಯೂನಲ್ಲಿ ನಿಲ್ಲಲು ಬಿಡದೇ ತಾನೇ ಊಟ ತಂದು ಕೊಡುತ್ತಿದ್ದರೆಂದು, ಆ ಕಾರಣಕ್ಕಾಗಿ ಮಲ್ಲಿಕಾಳನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಸಿಎಂ ಜಯಲಲಿತಾ ಅವರ ಅಪ್ಪಟ ಅಭಿಮಾನಿಯಾಗಿದ್ದ ಮಲ್ಲಿಕಾ 2014 ರಲ್ಲಿ ಜಯಲಲಿತಾರನ್ನು ಭೇಟಿ ಮಾಡಲು ಯತ್ನಿಸಿ ನಿರಾಶರಾಗಿದ್ದರು.
ಆರು ಮಹಿಳೆಯರನ್ನು ಕೊಂದ ಕಾರಣಕ್ಕೆ ಜೈಲಿಗೆ ಹೋದ ಹಂತಕಿಯರಲ್ಲಿ ಸೈನೈಡ್ ಮಲ್ಲಿಕಾ ಪ್ರಮುಖವಾದವಳು. ಬೆಂಗಳೂರಿನ ದೇವಸ್ಥಾನಗಳಿಗೆ ಬರುತ್ತಿದ್ದ ಶ್ರೀಮಂತ ಕುಟುಂಬದ ಮಹಿಳೆಯರ ಮೇಲೆ ಕಣ್ಣು ಹಾಕಿ ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಪರಿಚಯ ಆಪ್ತವಾಗುತ್ತಿದ್ದಂತೆ ಸೈನೈಡ್ ನೀಡಿ ಕೊಲೆ ಮಾಡುತ್ತಿದ್ದಳು ನಂತರ ಮಹಿಳೆಯರ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. 2008ರಲ್ಲಿ ಈಕೆಯನ್ನು ಬಂಧಿಸಲಾಗಿತ್ತು.
ಹಿಂಡಲಗಾ ಜೈಲು ದೇಶದಲ್ಲಿಯೇ ಅತಿ ಹಳೇಯ ಕಾರಾಗೃಹವಾಗಿದೆ, ಮರಣದಂಡನೆಗೆ ಗುರಿಯಾಗಿರುವ ಹಲವು ಅಪರಾಧಿಗಳು ಹಿಂಡಲಗಾ ಜೈಲಿನಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


