ಹಿಂಡಲಗಾ ಜೈಲು

ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಮೊಬೈಲ್ ಫೋನ್ ಎಸೆಯುತ್ತಿರುವ ವಿಡಿಯೋ ವೈರಲ್: ಡಿಐಜಿ ಸ್ಪಷ್ಟನೆ ಏನು?
ಜೈಲಿನ ಭದ್ರತೆಗಾಗಿ ನಿಯೋಜಿಸಲಾದ ಕೆಲವು ಸಿಐಎಸ್‌ಎಫ್ ಸಿಬ್ಬಂದಿ ಕೈವಾಡವಿದೆ ಎಂದು ಶೇಷ್ ಹೇಳಿದರು. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಹಿಂಡಲಗಾ ಕಾರಾಗೃಹದಲ್ಲಿ KSISF ಅಧಿಕಾರಿಗಳ ಜಟಾಪಟಿ: ಕ್ರಿಮಿನಲ್ ಪ್ರಕರಣ ದಾಖಲು
ಹಂದಿಗುಂದ ಗ್ರಾಮದ ನಿವಾಸಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಭೀಮಪ್ಪ ಬನಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಸ್ವಪ್ನಾ ಮಲ್ಲಿಕಾರ್ಜುನ್ ಉಳ್ಳಾಗಡ್ಡಿ ಅವರ ಮೇಲೆ ಕರ್ತವ್ಯದ ಸಮಯದಲ್ಲಿ ದುರ್ವರ್ತನೆ ಮತ್ತು ಹಲ್ಲೆ ಆರೋಪ ಹೊರಿಸಿದ್ದರು.

ಬೆಳಗಾವಿ: ಹೆಚ್ಚುವರಿ ವರದಕ್ಷಿಣೆ ಕೇಳಿ ಮದುವೆಯಾಗಲು ನಿರಾಕರಿಸಿದ ವರ ಇದೀಗ ಹಿಂಡಲಗಾ ಜೈಲು ಪಾಲು
ಬೆಳಗಾವಿ ಜಿಲ್ಲೆಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಕ್ಕಾಗಿ ವರನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಖಾನಾಪುರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ ಪ್ರಕರಣ: ಇಬ್ಬರು ಸಿಬ್ಬಂದಿಗಳ ಅಮಾನತು
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ನನ್ನ ಮಗನ ಹತ್ಯೆಗೆ ಪ್ರಯತ್ನಗಳು ನಡೆಯುತ್ತಿವೆ: ಹಿಂಡಲಗಾ ಜೈಲಿನ ಅಧಿಕಾರಿಗಳ ವಿರುದ್ಧ ಖೈದಿಯ ತಾಯಿ ಆರೋಪ
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಬೆಳಕಿಗೆ ಬಂದ ಬೆನ್ನಲ್ಲೇ ಜೈಲಿನ ಅಧಿಕಾರಿಗಳು ನನ್ನ ಮಗನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಕೈದಿಯೊಬ್ಬರ ತಾಯಿ ಆರೋಪಿಸಿದ್ದಾರೆ.

ಹಿಂಡಲಗಾ ಜೈಲಿನಿಂದ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ಕೈದಿಯನ್ನು ಮಹಾರಾಷ್ಟ್ರಕ್ಕೆ ಕರೆದೊಯ್ದ ನಾಗ್ಪುರ ಪೊಲೀಸರು
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಜಯೇಶ್ ಕಾಂತ ಅಲಿಯಾಸ್ ಜಯೇಶ್ ಪೂಜಾರಿ ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ ನಾಗ್ಪುರ ಪೊಲೀಸರು ಮಂಗಳವಾರ ಹಿಂಡಲಗಾ ಜೈಲಿನಿಂದ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದಾರೆ.

ನಿತಿನ್ ಗಡ್ಕರಿಗೆ ಬೆದರಿಕೆ ಕರೆ: ಹಿಂಡಲಗಾ ಜೈಲಿನಲ್ಲಿ ಪತ್ತೆಯಾಗಿಲ್ಲ ಫೋನ್; ಎಷ್ಟೇ ಶೋಧಿಸಿದ್ರು ಸಿಕ್ತಿಲ್ಲ ಸುಳಿವು!
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿ ಜಯೇಶ್ ಪೂಜಾರಿ ಕೈಗೆ ಮೊಬೈಲ್ ಫೋನ್ ಕೊಟ್ಟಿದ್ದು ಯಾರು? ಜೈಲಿನೊಳಗೆ ಮೊಬೈಲ್ ಫೋನ್ ಹೋಗಿದ್ದು ಹೇಗೆ? ಎಂಬ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ.

ಬೆಳಗಾವಿ: ಹಿಂಡಲಗಾ ಜೈಲಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ಭೇಟಿ: ಸೌಕರ್ಯಗಳ ಪರಿಶೀಲನೆ
ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸ್ವಾತಂತ್ರ್ಯವೀರ ಸಾವರ್ಕರ್ ಅವರನ್ನು ಬಂಧಿಸಿಡಲಾಗಿದ್ದ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದರು.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ: ಶಿಕ್ಷಣ ಸಚಿವ ನಾಗೇಶ್ ಭಾಗಿ
ಇಂದು ಗುರುವಾರ ಡಿಸೆಂಬರ್ 29ರಂದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಯಿತು.

