ರಾಜ್ಯ

ಕೊಹ್ಲಿಯನ್ನು ಜೆಟ್ ಪೈಲಟ್ ಆಗಿಸಲು ಹೇಗೆ ಮನವೊಲಿಸುವುದು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ: ಯುಕೆ ಸಚಿವ

ಭಾರತದಲ್ಲಿ ಕ್ರಿಕೆಟ್ ಗೆ ಭಾರೀ ಮಾರುಕಟ್ಟೆಯಿದೆ, ಹೀಗಾಗಿ ವಿರಾಟ್ ಕೊಹ್ಲಿಯನ್ನು ಹೇಗೆ ಜೆಟ್ ಪೈಲಟ್ ಮಾಡಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದೇವೆ,...

ಕೊಹ್ಲಿಯನ್ನು ಜೆಟ್ ಪೈಲಟ್ ಆಗಿಸಲು ಹೇಗೆ ಮನವೊಲಿಸುವುದು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ: ಯುಕೆ ಸಚಿವ
ವಿರಾಟ್ ಕೊಹ್ಲಿ
Published On :

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಗೆ ಭಾರೀ ಮಾರುಕಟ್ಟೆಯಿದೆ, ಹೀಗಾಗಿ ವಿರಾಟ್ ಕೊಹ್ಲಿಯನ್ನು ಹೇಗೆ ಜೆಟ್ ಪೈಲಟ್ ಮಾಡಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ಯುಕೆ ರಕ್ಷಣಾ ಸಚಿವ ಹ್ಯಾರಿಯೆಟ್ ಬಾಲ್ಡ್ ವಿನ್ ತಿಳಿಸಿದ್ದಾರೆ.

ಏರೋ ಇಂಡಿಯಾದ 11ನೇ ವೈಮಾನಿಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದಲ್ಲಿ  ಭಾರತದ ಸಾಧನೆ ಕುರಿತು ಮಾತನಾಡಿದ ಅವರು, ರಕ್ಷಣಾ ವಿಭಾಗದಲ್ಲಿ ಸಂಶೋಧನೆ, ತರಬೇತಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹಾಗೂ ಯುಕೆ ದೇಶಗಳು ಪರಸ್ಪರ ಹಂಚಿಕೊಳ್ಳುವ ವಿಷಯಗಳು ಹಲವು ಇವೆ ಎಂದು ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾದಲ್ಲಿ ಯುಕೆ ಪಾಲುದಾರನಾಗಿದ್ದು, ಭಾರತದ ಖಾಸಗಿ ವಲಯದ 20 ಉದ್ಯೋಗಗಳಲ್ಲಿ 1 ಯುಕೆಗೆ ನೀಡುವ ಒಪ್ಪಂದಕ್ಕೆ ಕಳೆದ ಗುರುವಾರ ಎರಡು ದೇಶಗಳು ಸಹ ಮಾಡಿವೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಎರಡು ದೇಶಗಳು ಮುಂದಾಗಿವೆ ಎಂದು ತಿಳಿಸಿದ್ದಾರೆ. ಐರೋಪ್ಯ ಒಕ್ಕೂಟದಿಂದ ಹೊರಬರಲು ಯುಕೆ ಸಿದ್ಧತೆ ನಡೆಸುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಸಣ್ಣ ಯೋಜನೆಗಳು ದೊಡ್ಡದ್ದನ್ನು ಮಾಡಲು ನೆರವಾಗುತ್ತವೆ ಎಂದು ಭಾರತ್ ಫೋರ್ಜ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.