ರಾಜ್ಯ

ಮೈಸೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆಟೋ ಚಾಲಕ ಸಾವು

ಪೊಲೀಸ್ ಕಸ್ಟಡಿಯಲ್ಲಿದ್ದ ಆಟೋ ಚಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ...

ಮೈಸೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆಟೋ ಚಾಲಕ ಸಾವು
ಸಾಂದರ್ಭಿಕ ಚಿತ್ರ
Published On :

ಮೈಸೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆಟೋ ಚಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಣಕಂಠ(25) ಮೃತ ವ್ಯಕ್ತಿ. ನೆರೆಮನೆ ವ್ಯಕ್ತಿಯೊಂದಿಗೆ ಗಲಾಟೆ ಮಾಡಿದ ಆರೋಪದ ಮೇರೆಗೆ ಪೊಲೀಸರು ಮಣಿಕಂಠನನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದರು. ಮೈಸೂರಿನ ಗಾಂಧಿ ನಗರದ ನಿವಾಸಿ ಮಣಿಕಂಠ ಶುಕ್ರವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾನೆ. ಇದೊಂದು ಲಾಕಪ್‌ ಡೆತ್‌ ಎಂದು ಆರೋಪಿಸಿದ ಪೋಷಕರು, ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಶ್ರೀನಿವಾಸ ಮತ್ತು ಮಣಿಕಂಠ ತಾಯಿ ಜಯಮ್ಮ ನಡುವೆ ಶುಕ್ರವಾರ ರಾತ್ರಿ 9.30ಕ್ಕೆ ಗಲಾಟೆ ನಡೆದಿದೆ. ತಾಯಿಯ ವಿರುದ್ಧ ನೆರೆ ಮನೆಯವರು ಮಾಡಿದ ಆರೋಪ ಮಣಿಕಂಠ ಅವರನ್ನು ಕೆರಳಿಸಿತು. ಮಣಿಕಂಠ ಶ್ರೀನಿವಾಸ್ ವಿರುದ್ದ ಜಗಳಕ್ಕೆ ನಿಂತಿದ್ದಾನೆ, ಇದಕ್ಕೆ ಅವರ ಸಂಬಂಧಿಗಳಾದ ಬೈರಮ್ಮ, ಗೀತಮ್ಮ ಮತ್ತು ಮೂರ್ತಿ ಎಂಬುವರು ಸಾಥ್ ನೀಡಿದ್ದಾರೆ. ಎಂರಡು ಗುಂಪುಗಳಿಗೂ ಜೋರಾಗಿ ಜಗಳ ನಡೆಯುತ್ತಿರುವಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ನರಸಿಂಹರಾಜ ಠಾಣೆ ಪೊಲೀಸರು, ಗಲಾಟೆಯಲ್ಲಿ ಅಸ್ವಸ್ಥಗೊಂಡು ಆಟೊದಲ್ಲಿ ಮಲಗಿದ್ದ ಮಣಿಕಂಠನನ್ನು ಠಾಣೆಗೆ ಕರೆದೊಯ್ಯಲು ಮುಂದಾದಾಗ ಇದಕ್ಕೆ ಜಯಮ್ಮ ಅವಕಾಶ ಕೊಡಲಿಲ್ಲ. ಹೇಳಿಕೆ ಪಡೆದು ನಾಳೆ ಬೆಳಗ್ಗೆ ಮನೆಗೆ ಕಳುಹಿಸುವುದಾಗಿ ಭರವಸೆ ನೀಡಿ ರಾತ್ರಿ 11.30ಕ್ಕೆ ಮಣಿಕಂಠನನ್ನು ಠಾಣೆಗೆ ಕರೆದೊಯ್ಯಲಾಯಿತು.

ಮಧ್ಯರಾತ್ರಿ ಮಣಿಕಂಠ ಠಾಣೆಯಲ್ಲಿ ಕುಸಿದು ಬಿದ್ದಿದ್ದಾನೆ ತಕ್ಷಣ ಅವರನ್ನು ಕೆ.ಆರ್‌.ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ತರುವ ಮುನ್ನವೇ ಮಣಿಕಂಠ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.ಶ್ರೀನಿವಾಸ ಹಾಗೂ ಪೊಲೀಸರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಿದರು. ರಾತ್ರಿಯೇ ಮೃತಪಟ್ಟರೂ ಬೆಳಿಗ್ಗೆವರೆಗೂ ಮಾಹಿತಿ ನೀಡದಿರುವುದು ಅನುಮಾನ ಮೂಡಿಸಿದೆ ಎಂದು ದೂರಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರರಾವ್‌ ಠಾಣೆಗೆ ಕರೆದು ಕೊಂಡು ಬಂದ ತಕ್ಷಣವೇ ಕುಸಿದು ಬಿದ್ದಿದ್ದಾನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.