ರಾಜ್ಯ

ಉತ್ತರಾಖಂಡಕ್ಕೆ 11 ಆನೆಗಳನ್ನು ಗಿಫ್ಟ್ ನೀಡಿದ ಕರ್ನಾಟಕ

ರಾಜ್ಯ ಸರ್ಕಾರ 11 ಆನೆಗಳನ್ನು ಉತ್ತಾರಖಂಡದ ಅರಣ್ಯ ಕಾವಲು ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ...

ಉತ್ತರಾಖಂಡಕ್ಕೆ 11 ಆನೆಗಳನ್ನು ಗಿಫ್ಟ್ ನೀಡಿದ ಕರ್ನಾಟಕ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯ ಸರ್ಕಾರ 11 ಆನೆಗಳನ್ನು ಉತ್ತಾರಖಂಡದ ಅರಣ್ಯ ಕಾವಲು ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬುಧವಾರ ಮತ್ತಿಗೋಡು ಸಾಕಾನೆ ಶಿಬಿರದಿಂದ ಆನೆಗಳ ಸ್ಥಳಾಂತರ ಕಾರ್ಯ ಆರಂಭಗೊಳ್ಳಲಿದೆ
 
ದೊಡ್ಡಹಾರ್ವೆ ಆನೆ ಶಿಬಿರದಿಂದ ಮದಕರಿ (10 ವರ್ಷ), ಗಜರಾಜ (10), ಕೆಂಚಾಂಬ (20) ಹಾಗೂ ದುಬಾರೆಯ ಹೆಣ್ಣು ಆನೆಗಳಾದ ಶಿವಗಂಗೆ (25), ಕಪಿಲಾ (32) ಹಾಗೂ ಕಪಿಲಾಳ 20 ತಿಂಗಳ ಮರಿಯಾನೆಯನ್ನು ಮಂಗಳವಾರ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ ಮಾಡಲಾಯಿತು. ಪ್ರತಿ ಸಾಕಾನೆಗಳ ಮಾವುತರು ಹಾಗು ಕಾವಾಡಿಗಳನ್ನೂ ಈ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಮತ್ತಿಗೋಡು ಆನೆ ಶಿಬಿರಕ್ಕೆ ಕರೆದೊಯ್ಯಲಾಯಿತು. ಇವುಗಳೊಂದಿಗೆ ತುಂಗಾ (15), ಮತ್ತೊಂದು ಮರಿಯಾನೆ (1.8 ವರ್ಷ) ಕರ್ಣ (6) ಭೀಷ್ಮ (9) ಆನೆಗಳೂ ಬುಧವಾರ ಉತ್ತರಾಖಂಡ್‌ಗೆ ಪ್ರಯಾಣ ಬೆಳಸಲಿವೆ.
 
11 ಸಾಕಾನೆಗಳನ್ನು ಉತ್ತಾರ ಖಂಡಗೆ ರವಾನಿಸಲು ಆರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ತರಬೇತಿ ನೀಡುತ್ತಿರುವ ಮಾವುತರೂ ಗಜಪಡೆಯೊಂದಿಗೆ ತೆರಳಲಿದ್ದಾರೆ. ದುಬಾರೆಯ ಮೂರು ಆನೆಗಳು ಉತ್ತರಾಖಂಡ್‌ಗೆ ಕಳುಹಿಸಲಾಗುತ್ತಿದ್ದು ಉಳಿದ 30 ಆನೆಗಳು ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುತ್ತವೆ.

ರಾಜ್ಯದಲ್ಲಿ 4 ಪ್ರಮುಖ ಆನೆ ಶಿಬಿರಗಳಿವೆ. ಶಿವಮೊಗ್ಗದ ಸಕ್ರೆಬೈಲು, ಹುಣಸೂರಿನ ದೊಡ್ಡಾವರೆ, ಕೊಡಗಿನ ಮತ್ತಿಗೋಡು ಮತ್ತು ದುಬಾರೆ ಶಿಬಿರಗಳಲ್ಲಿ ಆನೆಗಳಿವೆ. ಮತ್ತಿಗೋಡು ಆನೆ ಕ್ಯಾಂಪ್ ನಲ್ಲಿ 29, ಸಕ್ರೆಬೈಲಿನಲ್ಲಿ 30, ದೊಡ್ಡಾವರೆಯಲ್ಲಿ 10, ದುಬಾರೆ ಆನೆ ಶಿಬಿರದಲ್ಲಿ 31 ಆನೆಗಳಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.